ನಮಕ್ ಹರಾಮ್ ನಲ್ಲಿ ರಾಪಿಡ್ ರಶ್ಮಿ ?

ಗುರುವಾರ, 10 ಏಪ್ರಿಲ್ 2014 (10:49 IST)
PR
ಆರಂಭದಲ್ಲಿ ನಮಕ್ ಹರಾಮ್ ಅನ್ನುವ ಟೈಟಲ್ ರಿಜೆಕ್ಟ್ ಆದರೂ ಸಹಿತ ಮತ್ತೊಮ್ಮೆ ಆ ಹೆಸರು ಓಕೆ ಆಗಿದೆ ಕರ್ನಾಟಕ ಫಿಲಂ ಚೇಂಬರ್ ಕಮಿಟಿಯಲ್ಲಿ. ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಮಹೇಶ್. ನಮಕ್ ಹರಾಮ್ ಚಿತ್ರದ ಮೇಕಿಂಗ್ ಕೆಲಸ ವನ್ನು ಶ್ರೀ ರಾಮನವಮಿ ದಿನದಂದು ರೇಣು ಸ್ಟುಡಿಯೋದಲ್ಲಿ ಮಾಡಲಾಯಿತು.

ನಾಗರಾಜ್ ಪೀಣ್ಯ ಎನ್ನುವ ನಿರ್ದೇಶಕರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಎರಡನೆ ನಿರ್ದೇಶನದ ಚಿತ್ರವಾಗಿದೆ. ಪದೇಪದೇ ಚಿತ್ರವನ್ನು ಈ ಮೊದಲು ಇವರು ನಿರ್ದೇಶಿಸಿದ್ದರು. ರೇಡಿಯೋ ಜಾಕಿ ರಾಪಿಡ್ ರಶ್ಮಿ ಈ ಚಿತ್ರಕ್ಕೆ ಹೀರೋಯಿನ್ ಆಗುವ ಸಾಧ್ಯತೆ ಇದೆ. ಈಗಾಗಲೇ ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಒಂದು ಸುತ್ತಿನ ಮಾತುಕತೆಯನ್ನು ಮಾಡಲಾಗಿದೆಯಂತೆ ರಶ್ಮಿ ಜೊತೆಯಲ್ಲಿ!

ವೆಬ್ದುನಿಯಾವನ್ನು ಓದಿ