ಬೆನ್ನು ನೋವು ಉಪಶಮನಕ್ಕೆ 'ಬೆಳ್ಳುಳ್ಳಿ, ಬಸಳೆ' ರಾಮಬಾಣ

ಸೋಮವಾರ, 9 ಜನವರಿ 2012 (11:19 IST)
PR
ಸಾಫ್ಟ್‌ವೇರ್ ಕಂಪೆನಿಯಲ್ಲಿ ದುಡಿಯುತ್ತಿರುವ ಶೀಲಾ ಆಗಾಗ ಕಾಡುವ ತೀವ್ರವಾದ ಬೆನ್ನುನೋವಿನಿಂದ ಸಂಕಟಪಡುತ್ತಿದ್ದಾಳೆ ಮೊದ ಮೊದಲು ಸ್ವಲ್ಪ ಸ್ವಲ್ಪವೇ ತನ್ನ ಇರುವಿಕೆಯನ್ನು ವ್ಯಕ್ತಪಡಿಸುತಿದ್ದ ಬೆನ್ನು ನೋವು ಈಗೀಗಂತೂ ಸಹಿಸಲು ಸಾಧ್ಯವಾಗದಷ್ಟು ಉಲ್ಬಣಗೊಂಡಿದೆ. ಶೀಲಾಳ ಈ ಸಮಸ್ಯೆ ಕೇವಲ ಅವಳೊಬ್ಬಳದ್ದು ಮಾತ್ರವಲ್ಲ ಮನುಕುಲದ ಯಾವ ಹೆಣ್ಣನ್ನೂ ಬಿಟ್ಟಿಲ್ಲ ಎಂಬುದಂತೂ ಸತ್ಯ. ಆದರೂ ಹೊರಗೆ ದುಡಿಯುವ ಹೆಣ್ಣುಮಕ್ಕಳಲ್ಲಿ ಇತ್ತೀಚೆಗೆ ಈ ನೋವು ತುಸು ಹೆಚ್ಚಾಗಿಯೇ ಕಂಡುಬರುತ್ತಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಒತ್ತಡದ ಜೀವನ, ಕುಳಿತಲ್ಲೇ ಮಾಡುವ ಕೆಲಸ, ಆಹಾರದಲ್ಲಿನ ಮಾರ್ಪಾಡುಗಳು ಹೀಗೆ ಬದಲಾದ ಜೀವನ ಶೈಲಿಯಿಂದ ಬೆನ್ನುನೋವು ಕಂಡುಬರುತ್ತದೆ. ಆದರೆ ಇದು ಕಾಯಿಲೆಯಾಗಿರದೆ ಒಂದು ಬಗೆಯ ರೋಗ ಲಕ್ಷಣವಾಗಿದೆ. ತೀವ್ರ ಯಾತನಾಮಯವಾಗಿರುವ ಹಾಗೂ ಅಶಕ್ತತೆಯುಳ್ಳ ಕಾಯಿಲೆಯಾಗಿದ್ದು ಇದು ಬಹುವಿಧ ದೈಹಿಕ ಅಂಶಗಳಿಂದ(ಮಲ್ಟಿಪಲ್ ಫಿಸಿಕಲ್ ಫ್ಯಾಕ್ಟರ್ಸ್) ತನ್ನ ಮೂಲವನ್ನು ಪಡೆದಿವೆ. ಇದು ದೇಹದ ಯಾವುದೇ ಭಾಗದಲ್ಲೂ ತನ್ನ ಪರಿಣಾಮವನ್ನು ಬೀರಬಹುದು. ದೃಢವಾದ ನೋವು, ಮುಂದೆ ಬಾಗುವಾಗ ಉಂಟಾಗುವ ನೋವು, ಅಂಗಾಂಗಳಲ್ಲಿನ ನೋವು ಇದರ ಪ್ರಮುಖ ಲಕ್ಷಣವಾಗಿದೆ.

ಇದನ್ನು ಜೀವನ ಪರ್ಯಂತ ಸಹಿಸಿಕೊಂಡಿರಲೇಬೇಕೆಂದಿಲ್ಲ. ಕೊಂಚ ಪಥ್ಯದ ಆಹಾರ ವಿಧಾವನ್ನು ನಮ್ಮ ದೈನಂದಿನ ಜೀವನದಲ್ಲಿ ನಾವು ಅಳವಡಿಸಿದರೆ ಇದರಿಂದ ಶೀಘ್ರ ಮುಕ್ತಿಯನ್ನು ಹೊಂದಬಹುದು.

ಲಿಂಬೆಯಲ್ಲಿರುವ 'ಸಿ' ಸತ್ವ, ಬೆಳ್ಳುಳ್ಳಿ, ಬಟಾಟೆ, ಕೆಲವು ಗಿಡಮೂಲಿಕೆಗಳನ್ನೊಳಗೊಂಡ ಔಷಧಗಳು ಇದಕ್ಕೆ ರಾಮಬಾಣವಾಗಿದೆ. ಟೊಮೆಟೋ, ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಗಡ್ಡೆಕೋಸುಗಳಿಂದ ಮಾಡಿದ ಸಲಾಡ್‌ಗಳನ್ನು ಆಹಾರದಲ್ಲಿ ಬಳಸಬೇಕು. ಹೂಕೋಸು, ಕಾಲಿಫ್ಲವರ್, ಬಸಳೆ, ಸೌತೆಕಾಯಿ ಮೊದಲಾದವುಗಳನ್ನು ಹದವಾಗಿ ಬೇಯಿಸಿ ಸೇವಿಸಿದರೆ ಉತ್ತಮ ಅದೇ ರೀತಿ ಬಾಳೆಹಣ್ಣನ್ನು ಬಿಟ್ಟು ಉಳಿದೆಲ್ಲಾ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಬೆನ್ನು ನೋವನ್ನು ಹೊಂದಿರುವ ವ್ಯಕ್ತಿಯು ಕೊಬ್ಬು ಇರುವ ಪದಾರ್ಥಗಳು, ಖಾರ ಪದಾರ್ಥಗಳು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು, ಮೊಸರು, ಸಿಹಿತಿಂಡಿಗಳು, ಸಕ್ಕರೆ, ಉಪ್ಪಿನಕಾಯಿ ಟೀ ಕಾಫಿ ಮೊದಲಾದವುಗಳನ್ನು ವರ್ಜಿಸಲೇಬೇಕು. ಕಡಿಮೆ ನ್ಯೂಟ್ರಿನ್‌ಗಳನ್ನು ಹೊಂದಿರುವ ಸಂರಕ್ಷಣೆಗೆ ಪ್ರಕ್ರಿಯಿಸಲ್ಪಟ್ಟ ಆಹಾರ ಪದಾರ್ಥಗಳನ್ನು ನೀವು ನಿಮ್ಮ ಡಯೆಟ್ ಪಟ್ಟಿಯಿಂದ ಹೊರಗಿರಿಸಲೇಬೇಕು. ಧೂಮಪಾನ ಹಾಗೂ ತಂಬಾಕು ಸೇವನೆ ಸಂಪೂರ್ಣವಾಗಿ ತ್ಯಜಿಸಿದರೆ ನಿಮ್ಮ ಬೆನ್ನು ನೋವು ಉಪಶಮನಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ