ಫೇಸ್‌ಬುಕ್‌ಗೆ ಹೆಚ್ಚು ಅಂಟಿಕೊಂಡರೆ ಆಹಾರ ಸೇವನೆ ಅವ್ಯವಸ್ಥೆ ಹೆಚ್ಚು

PR
PR
ಸದಾ ಕಾಲ ನೀವು ಇನ್ನೊಂದು 'ಲೈಕ್' ನಿರೀಕ್ಷೆಯಲ್ಲಿ ಫೇಸ್‌ಬುಕ್‌ಗೆ ಅಂಟಿಕೊಂಡಿರುತ್ತೀರಾ:? ಈ ಚಟವನ್ನು ನಿಲ್ಲಿಸುವುದು ಒಳ್ಳೆಯದು. ಏಕೆಂದರೆ ಇದರಿಂದ ಮಹಿಳೆಯರಲ್ಲಿ ನಕಾರಾತ್ಮಕ ಭಾವನೆಗಳು ಉಂಟಾಗಿ ನಂತರ ಆಹಾರ ಸೇವನೆ ಅವ್ಯವಸ್ಥೆಗಳು ಉಂಟಾಗುತ್ತವೆ. ಫೇಸ್‌ಬುಕ್‌ನಲ್ಲಿ ಕಳೆಯುವ ಸಮಯವನ್ನು ಕಳಪೆ ದೇಹದ ಚಿತ್ರಕ್ಕೆ ನಂಟು ಕಲ್ಪಿಸುವ ಮೊದಲ ಅಧ್ಯಯನದಲ್ಲಿ , ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹೆಚ್ಚು ನಕಾರಾತ್ಮಕ ಭಾವನೆಗಳು ಉದ್ಭವಿಸುತ್ತದೆ.

ಸ್ನೇಹಿತೆಯರ ದೇಹಗಳ ಜತೆ ತಮ್ಮ ದೇಹವನ್ನು ಹೋಲಿಸಿಕೊಂಡು ನಕಾರಾತ್ಮಕ ಮನೋಭಾವ ಬೆಳೆಯುವುದಕ್ಕೆ ದಾರಿ ಕಲ್ಪಿಸುತ್ತೆಂದು ಸಂಶೋಧಕರು ಹೇಳಿದ್ದಾರೆ.ಸಂಶೋಧಕರು ಸುಮಾರು 881 ಕಾಲೇಜು ಯುವತಿಯರನ್ನು ಅವರ ಫೇಸ್‌ಬುಕ್ ಬಳಕೆ, ಆಹಾರಸೇವನೆ ಮತ್ತು ವ್ಯಾಯಾಮ ಅಭ್ಯಾಸಗಳು ಮತ್ತು ದೇಹದ ಚಿತ್ರದ ಬಗ್ಗೆ ಸಮೀಕ್ಷೆ ನಡೆಸಿದರು.

ಬೇರೆ ಸ್ನೇಹಿತೆಯರ ದೇಹದ ಚಿತ್ರದ ಆಕಾರಗಳನ್ನು ಅಥವಾ ಪೋಸ್ಟ್‌ಗಳನ್ನು ನೋಡಿ ತಮ್ಮ ದೇಹ ಸೌಂದರ್ಯದ ಬಗ್ಗೆ ನಕಾರಾತ್ಮಕ ಭಾವನೆ ಹೊಂದುತ್ತಾರೆಂದು ಇದರಿಂದ ಪತ್ತೆಯಾಗಿದೆ.ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಋಣಾತ್ಮಕ ಭಾವನೆಗಳು ಮತ್ತು ಸ್ನೇಹಿತೆಯರ ದೇಹಗಳ ಜತೆ ತಮ್ಮ ದೇಹವನ್ನು ಹೋಲಿಸಿಕೊಳ್ಳುವುದಕ್ಕೆ ಸಂಬಂಧಿಸಿದೆ ಎಂದು ಸಹ ಲೇಖಕ ಯುಸುಫ್ ಕಲ್ಯಾಂಗೋ ತಿಳಿಸಿದರು.

ವೆಬ್ದುನಿಯಾವನ್ನು ಓದಿ