ಚಿನ್ನಾಭರಣ ಕಡ್ಡಾಯವಾಗಿ ಹಾಲ್‌ಮಾರ್ಕ್ ಚಿಹ್ನೆ ಹೊಂದಿರಬೇಕು: ಕೇಂದ್ರ

ಬುಧವಾರ, 4 ಜನವರಿ 2012 (17:38 IST)
PR
ವಿಶ್ವದ ಅತಿಹೆಚ್ಚು ಚಿನ್ನವನ್ನು ಖರೀದಿಸುವ ರಾಷ್ಟ್ರವಾಗಿರುವ ಭಾರತದಲ್ಲಿನ ಚಿನ್ನಾಭರಣ ಖರೀದಿಸುವ ಗ್ರಾಹಕರು ಕೆಲವೊಮ್ಮೆ ತೊಂದರೆಗೆ ಒಳಗಾಗುತ್ತಿರುವರು, ವಿಶೇಷವಾಗಿ ಸಣ್ಣ ಆಭರಣ ತಯಾರಕರು ಮತ್ತು ಚಿನ್ನ ಖರೀದಿಸುವ ಗ್ರಾಹಕರು ಊಹಿಸಲಾಗದಷ್ಟು ವಂಚನೆಗೆ ಬಲಿಯಾಗುತ್ತಿದ್ದಾರೆ. ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಸಿಮೆಂಟ್, ಖನಿಜಯುಕ್ತ ನೀರು, ಹಾಲಿನ ಉತ್ಪನ್ನಗಳನ್ನು ಹಾಗೂ ಚಿನ್ನಾಭರಣಗಳನ್ನು ಒಳಗೊಂಡಂತೆ ಇತರ 77 ಉತ್ಪನ್ನಗಳು ಮತ್ತು ಹಾಲ್‌ಮಾರ್ಕ್ ಚಿಹ್ನೆಯನ್ನು BIS ಕಾಯ್ದೆಯಡಿ ಹೊಂದಿರಲೇ ಬೇಕು ಎಂದು ನಿರ್ಧರಿಸಿದೆ.

ಸ್ವಯಂಪ್ರೇರಿತ ಆಭರಣ ಹಾಲ್‌ಮಾರ್ಕ್ ಚಿಹ್ನೆಯ ಬಳಕೆಯು 2001ರಿಂದ ಬ್ಯೂರೋ ಆಫ್ ಇಂಡಿಯನ್ನ ಸ್ಟ್ಯಾಂಡರ್ಡ್ಸ್ (BIS) ಎಂಬಂತಹ ಸರಕಾರಿ ಏಜನ್ಸಿಯಿಂದ BIS ಕಾಯ್ದೆ, 1986 ರ ಅಡಿಯಲ್ಲಿಯೇ ಪ್ರಾರಂಭವಾಗಿತ್ತು. ಈಗ ಇದನ್ನು ಕಡ್ಡಾಯಗೊಳಿಸಲಾಗಿದೆ.

2011 ರ ನಾಲ್ಕನೇ ತ್ರೈ ಮಾಸಿಕದಲ್ಲಿ 125 ಟನ್ನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ, ವಾರ್ಷಿಕ ಸರಾಸರಿಯ ಆಮದಿನ ಪ್ರಮಾಣದಲ್ಲಿ 8.4 ನಷ್ಟು ಏರಿಕೆಯಾಗಿದೆ. ಚಿನ್ನದ ಬೆಲೆಯು ಗಗನ ಚುಂಬಿಸಿದೆ. ಕಳೆದ ವರ್ಷ 2011 ರಲ್ಲಿ 878 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ಮುಂಬೈನ ಚಿನಿವಾರಪೇಟೆ ಅಸೋಸಿಯೇಶನ್ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಸಂದರ್ಶನ ಒಂದರಲ್ಲಿ ತಿಳಿಸಿದರು.

ಆದರೆ ಅಕ್ಟೋಬರ್-ಡಿಸೆಂಬರ್ ತಿಂಗಳಿನ ಆಮದಿನ ಪ್ರಮಾಣವನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ ಎಂದು ಹೇಳಿದರು. ಕಳೆದ ವರ್ಷ ಇದೇ ಸಮಯದಲ್ಲಿ 281 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು. ಅಂತೆಯೇ 2010 ರಲ್ಲಿ 1000 ಟನ್‌ಗೂ ಮಿಗಿಲಾದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ