ರೂಪಾಯಿಗೆ ಸೈ ಎಂದ ಇರಾನ್; ಭಾರತಕ್ಕೆ ಲಾಭವಾಗಲಿದೆ

ಶನಿವಾರ, 3 ಮಾರ್ಚ್ 2012 (18:55 IST)
PR
ಕೆಲವಾರು ವರ್ಷಗಳಿಂದ ಇರಾನ್‍ನೊಂದಿಗೆ ಬಾಕಿ ಇರಿಸಿಕೊಳ್ಳಲಾಗಿದ್ದ ರಫ್ತು ವಹಿವಾಟು ಸಾಲವನ್ನು ರೂಪಾಯಿ ವಹಿವಾಟಿನಲ್ಲಿ ಸ್ವೀಕರಿಸಲು ಇರಾನ್ ಸಮ್ಮತಿ ಸೂಚಿಸಿದೆ. ಈ ನಡುವೆ, ಭಾರತ-ಇರಾನ್ ನಡುವೆ ಬೃಹತ್ ರಫ್ತು ಆಮದು ವಹಿವಾಟು ನಡೆಸಲು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಇರಾನ್ ಅಣುಶಕ್ತಿ ಬಲಪಡಿಸುತ್ತಿರುವುದನ್ನು ವಿರೋಧಿಸಿ ಇರಾನಿನ ಆರ್ಥಿಕ ಶಕ್ತಿಯನ್ನು ಕುಗ್ಗಿಸುವ ಸಲುವಾಗಿ ಅಮೆರಿಕ ಹಾಗೂ ಯುರೋಪ್ ಒಕ್ಕೂಟಗಳು ಇರಾನ್‌ಗೆ ಬೇಕಾಗಿರುವ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಇರಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಇಂಧನ ವಹಿವಾಟಿಗೆ ಅಂತಾರಾಷ್ಟ್ರೀಯ ವ್ಯಾಪಾರ ನಿರ್ಬಂಧ ಹೇರಿರುವ ಬೆಳವಣಿಗೆ ಭಾರತಕ್ಕೆ ತುಂಬಾ ಅನುಕೂಲಕರವಾಗಿ ಪರಿಣಮಿಸಿರುವುದಾಗಿ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ರಾಹುಲ್ ಖುಲ್ಲಾರ್ ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ