ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ತಮಿಳುನಾಡಿಗೆ ನೀರು: ಸಿಎಂ

ಶನಿವಾರ, 19 ಏಪ್ರಿಲ್ 2014 (17:42 IST)
PR
PR
ಬೆಂಗಳೂರು: ಕರ್ನಾಟಕ ಸರ್ಕಾರ ಕಾವೇರಿ ನೀರು ಬಿಡುತ್ತಿಲ್ಲವೆಂದು ತಮಿಳುನಾಡು ಮುಖ್ಯಮಂತ್ರಿ ಜಯಲಿಲತಾ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ ಎಂದು ತಿಳಿಸಿದರು.ಜಯಲಲಿತಾ ಆರೋಪಗಳನ್ನು ನಿರಾಧಾರ ಎಂದು ಬಣ್ಣಿಸಿದ ಅವರು, ಜಯಲಲಿತಾ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಇದಕ್ಕೆ ಸಂಬಂಧಿಸಿದಂತೆ ದೃಢ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.ಅವರಿಬ್ಬರೂ ಮೂಲ ಕಾರಣ.

ಇಬ್ಬರಿಗೂ ಕಾವೇರಿ ವಿಷಯದಲ್ಲಿ ತಮ್ಮ ಪಾತ್ರದ ಬಗ್ಗೆ ಅರಿವಿದ್ದು, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸಿದ್ದಾರೆ ಎಂದು ಹೇಳಿದರು.ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಇಲ್ಲಿಗೆ ಆಗಮಿಸಿರುವ ಸಿದ್ದರಾಮಯ್ಯ, ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ, ಕಾಂಗ್ರೆಸ್ ಸದಾ ಸುಪ್ರೀಂಕೋರ್ಟ್ ಆದೇಶಕ್ಕೆ ತಲೆಬಾಗಿದೆ. ನೀರು ದಾಸ್ತಾನು ಮತ್ತು ಸಾಧ್ಯತೆಯನ್ನು ಆಧರಿಸಿ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನುಡಿದರು.ಇಂತಹ ಜಟಿಲ ವಿಷಯದ ಬಗ್ಗೆ ಕಾಂಗ್ರೆಸ್, ಡಿಎಂಕೆ ಮತ್ತು ಬಿಜೆಪಿಯ ವಂಚನೆಯನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮಿಳುನಾಡಿಗೆ ಕಾವೇರಿಯ ಒಂದು ಹನಿ ನೀರನ್ನೂ ಬಿಡುತ್ತಿಲ್ಲ ಎಂದು ಜಯಲಲಿತಾ ಆರೋಪಿಸಿದ್ದರು.

ಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರ ನೀರು ಬಿಡಲಾಗುತ್ತದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.ಸಿದ್ದರಾಮಯ್ಯ ಕೃಷ್ಣಗಿರಿಯಲ್ಲಿ ಚುನಾವಣೆ ಪ್ರಚಾರಕ್ಕೆ ಮುಂಚೆ ಅತ್ತಿಪಳ್ಳಿಯಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದರು. ನಂತರ ಅತಿಪಳ್ಳಿ, ಹೊಸೂರು ಮತ್ತು ತಾಲಿ ಪ್ರದೇಶದಲ್ಲಿ ಅವರು ರ‌್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.

ವೆಬ್ದುನಿಯಾವನ್ನು ಓದಿ