ಇಸ್ಲಾಂ- ಹುಟ್ಟು, ನಂಬಿಕೆಗಳು

ಇಳಯರಾಜ

ಭಾನುವಾರ, 3 ಜೂನ್ 2007 (18:49 IST)
PTI
ಪ್ರವಾದಿ ಮುಹ್ಮದ್ ಇಸ್ಲಾಂ ಧರ್ಮದ ಪ್ರತಿಪಾದಕರು. ಏಳನೆ ಶತಮಾನದ ಈ ರಾಜಕೀಯ ಹಾಗೂ ಧಾರ್ಮಿಕ ಗುರುವಿನ ಬೋಧನೆಯನ್ನು ಇಸ್ಲಾಂ ಧರ್ಮದ ಅನುಯಾಯಿಗಳು ಪಾಲಿಸುತ್ತಾರೆ.

ಇದು ಪ್ರಮುಖ ಧರ್ಮಗಳ ಸಾಲಿನಲ್ಲಿ ಕಿರಿಯ ಧರ್ಮವೆಂದು ಕರೆಸಿಕೊಂಡಿದ್ದರೂ, ವಿಶ್ವದಲ್ಲಿ ಎರಡನೆ ಅತಿದೊಡ್ಡ ಧರ್ಮವಾಗಿ ಮೂಡಿ ಬಂದಿದೆ. ವಿಶ್ವಾದ್ಯಂತ ಸರಿಸುಮಾರು 1.4 ಶತಕೋಟಿ ಮಂದಿ ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದು, ಇವರನ್ನು ಮುಸ್ಲಿಮರೆಂದು ಕರೆಯಲಾಗುತ್ತದೆ.

ಇಸ್ಲಾಂ ಅಂದರೆ, ಸಮರ್ಪಣೆ ಎಂದರ್ಥ. ಮುಸ್ಲಿಂ ಅಂದರೆ, ತನ್ನನ್ನು ತಾನು ಸಂಪೂರ್ಣವಾಗಿ ಅಲ್ಲಾನಿಗೆ ಸಮರ್ಪಿಸಿಕೊಂಡವನೆಂಬ ಅರ್ಥ.

ಪ್ರವಾದಿ ಮುಹ್ಮದ್(570-632) ಕ್ರಿಸ್ತಶಕ 610ರಲ್ಲಿ ಈ ಧರ್ಮವನ್ನು ಹುಟ್ಟು ಹಾಕಿದರು. ಅವರು ಬೋಧಿಸಿರುವ ಪ್ರವಚನಗಳಾದ ಕೊರಾನ್ಅನ್ನು ಮುಸ್ಲಿಮರ ಪವಿತ್ರಗ್ರಂಥವೆಂದು ಪರಿಗಣಿಸಲಾಗಿದೆ.

ಕೊರಾನ್‌ಅನ್ನು ಮುಹ್ಮದ್ ಅವರು ಬೋಧಿಸಿದ್ದರೂ, ಇಸ್ಲಾಂ ಧರ್ಮ ಪ್ರವಾದಿಯವರು ಭೂಮಿಗೆ ಬರುವ ಮುನ್ನವೆ, ಆರಂಭವಾಗಿತ್ತು ಎಂದು ಹೇಳಲಾಗಿದೆ. ಕೊರಾನ್ ಅನ್ನು ದೇವರು ಗೇಬ್ರಿಯಲ್ ಮೂಲಕ ಪ್ರವಾದಿಯವರಿಗೆ ಬೋಧಿಸಿದ್ದಾರೆ ಎಂದು ಕೊರಾನ್ ಹೇಳುತ್ತದೆ.

ವೆಬ್ದುನಿಯಾವನ್ನು ಓದಿ