ಟಿವಿಗೂ ಕಾಲಿಟ್ಟಿತು ತೆಲುಗು ಡಬ್ಬಿಂಗ್ ಸಿನಿಮಾ! ಭಾನುವಾರ ಸೈರಾ ಸಿನಿಮಾ ಪ್ರಸಾರ

ಬುಧವಾರ, 18 ಡಿಸೆಂಬರ್ 2019 (09:49 IST)
ಬೆಂಗಳೂರು: ಇದುವರೆಗೆ ಡಬ್ಬಿಂಗ್ ಸಿನಿಮಾಗಳು ಬೆಳ್ಳಿತೆರೆಯಲ್ಲಷ್ಟೇ ಬರುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಕಿರುತೆರೆಗೂ ಕಾಲಿಡುತ್ತಿದೆ.


ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ಮುಂತಾದ ಬಹುತಾರಾಗಣವಿರುವ ತೆಲುಗಿನ ಸೈರಾ ಸಿನಿಮಾ ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ತೆರೆ ಕಂಡಿತ್ತು. ಆ ಸಿನಿಮಾದ ಕನ್ನಡ ಅವತರಣಿಕೆ ಕನ್ನಡ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.

ಸೈರಾ ಸಿನಿಮಾ ಇದೇ ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಆ ಮೂಲಕ ಡಬ್ಬಿಂಗ್ ಸಿನಿಮಾವೊಂದು ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾದಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ