ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜೇಬಿನಿಂದ ದುಡ್ಡು ಕೆಳಕ್ಕೆ ಬಿದ್ದರೆ ಏನಾಗುತ್ತೆ ಗೊತ್ತಾ...?

ಶನಿವಾರ, 10 ಫೆಬ್ರವರಿ 2018 (07:06 IST)
ಬೆಂಗಳೂರು : ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ.


ಒಂದು ವೇಳೆ ನಿಮ್ಮ ಜೇಬಿನಿಂದ ನಾಣ್ಯ ಬಿದ್ದರೆ ಅದು ಶುಭ ಸಂಕೇತ. ಶುಭ ಅಂತಾ ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಬೇಡಿ. ತಾನಾಗಿಯೇ ಕೆಳಗೆ ಬಿದ್ದಲ್ಲಿ ಮಾತ್ರ ಅದು ಶುಭ. ನಿಮ್ಮ ಜೇಬಿನಿಂದ ನಾಣ್ಯ ಅಥವಾ ನೋಟು ಕೆಳಗೆ ಬಿದ್ದರೆ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದು ಅರ್ಥ. ಧನ ವೃದ್ಧಿ ಎಷ್ಟು ವೇಗದಲ್ಲಾಗಲಿದೆಯೆಂದ್ರೆ ಅದ್ರ ಬಗ್ಗೆ ನೀವು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಧನದ ವೃದ್ಧಿಗೆ ಯಾವುದೇ ಸಮಯದ ಮಿತಿಯಿಲ್ಲ. ಆದ್ರೆ ಅಪರಿಚಿತ ಮೂಲಗಳಿಂದ ಧನ ಪ್ರಾಪ್ತಿಯಾಗಲಿದೆ ಎಂಬುದು ಮಾತ್ರ ಸತ್ಯ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ