ಮಹಿಳೆಯರು ಈ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದರೆ ಉತ್ತಮವಂತೆ
ಬುಧವಾರ, 7 ಫೆಬ್ರವರಿ 2018 (06:11 IST)
ಬೆಂಗಳೂರು : ಮದುವೆಯ ನಂತರ ಮಹಿಳೆ ತಾಯಿಯಾಗುವುದು ಎಂದರೆ ಅದು ಅವರಿಗೆ ಸೌಭಾಗ್ಯದ ವಿಷಯವಾಗಿದೆ. ತಾಯಿಯಾಗುವ ಇಚ್ಛೆ ಪ್ರತಿಯೊಬ್ಬ ಮಹಿಳೆಗೂ ಇರುತ್ತದೆ. ಆದರೆ ಅದು ಎಲ್ಲರಿಂದಲೂ ಸಾಧ್ಯವಾಗೋದಿಲ್ಲ. ಪ್ರತಿಯೊಬ್ಬ ಮಹಿಳೆಯರು ತಾಯಿಯಾಗಲು ಸರಿಯಾದ ಸಮಯ ಯಾವುದು ಅನ್ನೋದು ಗೊತ್ತಿರಬೇಕು.
ಕೆಲವು ಮಹಿಳೆಯರು ಕಡಿಮೆ ವಯಸ್ಸಿನಲ್ಲಿ ತಾಯಿಯಾಗುತ್ತಾರೆ. ಕೆಲವರು ಆರ್ಥಿಕವಾಗಿ ಸಫಲರಾದ ನಂತರ ಮಗು ಪಡೆಯುತ್ತಾರೆ. ಎಲ್ಲಾ ವಿಷಯಕ್ಕೂ ಒಂದು ಸರಿಯಾದ ಸಮಯ ಇರುತ್ತದೆ. ಅದರಂತೆ ಮಗುವಿಗೆ ಜನ್ಮ ನೀಡಲು ಕೂಡ ಸರಿಯಾದ ಸಮಯ ಇರುತ್ತದೆ.
ನಿಮ್ಮ ಮದುವೆ 20 ವರ್ಷದ ನಂತರ ಆಗಿದ್ದರೆ ಮಗುವಿಗೆ ಜನ್ಮ ನೀಡುವ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚು ಸಮಸ್ಯೆ ಕಂಡು ಬರುತ್ತದೆ. ಆದರೆ 20 ರ ನಂತರ ಮಗುವಿಗೆ ಜನ್ಮ ನೀಡಿದರೆ ಸಮಸ್ಯೆ ಕಡಿಮೆ ಇರುತ್ತದೆ. ಮಗುವನ್ನು ಹಡೆಯಲು ಸರಿಯಾದ ವಯಸ್ಸು 25. ಯಾಕೆಂದರೆ ಈ ಸಮಯದಲ್ಲಿ ಮಹಿಳೆಯರಿಗೆ ಕನ್ಸೀವ್ ಆಗಲು ಯಾವುದೆ ಸಮಸ್ಯೆ ಉಂಟಾಗುವುದಿಲ್ಲ. ಅಲ್ಲದೆ ಈ ವಯಸ್ಸಿನಲ್ಲಿ ಸ್ಪರ್ಮ್ ತುಂಬಾ ಫ್ರೆಶ್ ಆಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ