ಹಿಂದೂ ಶಾಸ್ತ್ರದ ಪ್ರಕಾರ ಹೆಣ್ಣು ಋತುಚಕ್ರದ ಸಮಯದಲ್ಲಿ ಈ ಆಚರಣೆಗಳನ್ನು ಪಾಲಿಸಬೇಕು
ಶನಿವಾರ, 14 ಏಪ್ರಿಲ್ 2018 (08:36 IST)
ಬೆಂಗಳೂರು : ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಮುಟ್ಟಿನ ಅಥವಾ ಋತುಚಕ್ರದ ಅವಧಿಯಲ್ಲಿ ಹಿಂದೂ ಹುಡುಗಿಯರು ಅನೇಕ ಕಟ್ಟುಪಾಡುಗಳನ್ನು ಪಾಲಿಸಬೇಕಾಗುತ್ತದೆ. ಅದು ಹಿಂದೆ ಮಾತ್ರವಲ್ಲ ಇಂದಿಗೂ ಕೂಡ ಜಾರಿಯಲ್ಲಿವೆ. ಆ ಆಚರಣೆಗಳು ಯಾವುದೆಂದು ಇಲ್ಲಿದೆ ನೋಡಿ.
*ಹಿ೦ದೂ ಸ೦ಪ್ರದಾಯದ ಕೆಲವೊ೦ದು ಕಲ್ಪನೆಗಳ ಪ್ರಕಾರ, ಋತುಚಕ್ರದ ಅವಧಿಯಲ್ಲಿ ಹುಡುಗಿಯು ಅಪವಿತ್ರಳಾಗಿರುವುದರಿಂದ ಮುಟ್ಟಾಗಿರುವ ಹೆಣ್ಣು ದೇವಾಲಯಕ್ಕೆ ಭೇಟಿ ಕೊಡುವ೦ತಿಲ್ಲ ಅಥವಾ ಆ ಸ೦ದರ್ಭದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವ೦ತಿಲ್ಲ.
*ಋತುಚಕ್ರದ ಅವಧಿಯಲ್ಲಿ ಹುಡುಗಿಯರು ಅಡುಗೆ ಮಾಡುವ ಹಾಗೇ ಇಲ್ಲ ಹಾಗೇ ಅಡುಗೆ ಕೋಣೆಯನ್ನು ಕೂಡ ಪ್ರವೇಶಿಸುವಂತಿಲ್ಲ.
*ಆ ಸಂದರ್ಭದಲ್ಲಿ ಉಪ್ಪಿನಕಾಯಿಯನ್ನು ಮುಟ್ಟುವಂತಿಲ್ಲ. ಒಂದುವೇಳೆ ಮುಟ್ಟಿದರೆ ಅದು ಹಾಳಾಗುತ್ತದೆ ಎಂಬ ನಂಬಿಕೆ ಇದೆ.
*ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಸಸ್ಯವೆಂದು ಪರಿಗಣಿಸಲಾಗಿದೆ. ಅದ್ದರಿಂದ ಹುಡುಗಿಯರು ಮುಟ್ಟಿನ ದಿನಗಳಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸುವಂತಿಲ್ಲ. ಈ ಅವಧಿಯಲ್ಲಿ ಅಂತಹ ಹುಡುಗಿಯರು ತಮ್ಮ ನೆರಳೂ ಸಹ ತುಳಸಿ ಗಿಡದ ಮೇಲೆ ಬೀಳದಂತೆ ಎಚ್ಚರವಹಿಸಬೇಕಾಗುತ್ತದೆ.
ಹಿಂದೂ ಸಂಪ್ರದಾಯದ ಪ್ರಕಾರ, ಋತುಚಕ್ರದ ಅವಧಿಯು ಮುಗಿದ ತರುವಾಯ ಮೂರನೆಯ ದಿನದಂದು ಆಕೆಯು ತನ್ನೆಲ್ಲಾ ಬಟ್ಟೆಗಳು ಹಾಗೂ ಹೊದಿಕೆ, ಬೆಡ್ ಶೀಟ್ ಗಳನ್ನು ಸ್ವಚ್ಛವಾಗಿ ಒಗೆಯಬೇಕು. ಹಾಗೂ ಸ್ನಾನ ಮಾಡಿ ಒಳಗೆ ಬರಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ