ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ದೇವಿಯ ಪೂಜೆ ಜೊತೆಗೆ ಗೋ ಪೂಜೆಯನ್ನೂ ಮಾಡಲಾಗುತ್ತದೆ. ಮಹಾವಿಷ್ಣುವಿಗೆ ಪ್ರಿಯನಾದ, ಮುಕ್ಕೋಟಿ ದೇವರ ಆವಾಸಸ್ಥಾನವಾದ ಗೋವಿಗೆ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಗೋ ಪೂಜೆ ಮಾಡುವಾಗ ಈ ಶಕ್ತಿ ಶಾಲೀ ಮಂತ್ರವನ್ನು ತಪ್ಪದೇ ಪಠಿಸಬೇಕು.
ಹಿಂದೂ ಧರ್ಮದಲ್ಲಿ ಗೋವಿಗೆ ಎಂಥಾ ಸ್ಥಾನವಿದೆ ಎಂದರೆ ಅದನ್ನು ಅತ್ಯಂತ ಪೂಜನೀಯ ದೃಷ್ಟಿಯಿಂದ ನೋಡಲಾಗುತ್ತದೆ. ಗೋವುಗಳನ್ನು ಪೂಜೆ ಮಾಡುವುದರಿಂದ ಸಕಲ ಪಾಪ ಪರಿಹಾರವಾಗುತ್ತದೆ. ಜೀವನ ಸಂಕಷ್ಟಗಳು ದೂರವಾಗುತ್ತದೆ. ಗೋವುಗಳಿಗೆ ಮೇವು ಅಥವಾ ಆಹಾರ ನೀಡುವುದರಿಂದ ಅದು ಆಹಾರ ನೀಡಿದವರನ್ನು ಮನಸಾರೆ ಹರಸುತ್ತದಂತೆ.
ಈ ಕಾರಣಕ್ಕೆ ಗೋ ಪೂಜೆ ಮಾಡುವಾಗ ಅವುಗಳಿಗೆ ತಪ್ಪದೇ ಗ್ರಾಸ ನೀಡಲಾಗುತ್ತದೆ. ಹುಲ್ಲು, ಹಣ್ಣು, ಅನ್ನ ಹೀಗೆ ಗೋ ಗ್ರಾಸವಾಗಿ ಏನನ್ನೇ ನೀಡಿದರೂ ಹಸು ಅದನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ನಮ್ಮನ್ನು ಆಶೀರ್ವದಿಸುತ್ತದೆ.