ಶಾಸ್ತ್ರದ ಪ್ರಕಾರ ಕೂದಲು ಹಾಗೂ ಉಗುರು ಕತ್ತರಿಸಲು ಈ ದಿನ ತುಂಬಾ ಪ್ರಶಸ್ತವಾಗಿದೆಯಂತೆ

ಭಾನುವಾರ, 14 ಜುಲೈ 2019 (06:28 IST)
ಬೆಂಗಳೂರು : ನಮ್ಮ ಉಗುರು ಮತ್ತು ಕೂದಲು ಕತ್ತರಿಸಿದರೆ ಮತ್ತ ಮತ್ತೆ ಹುಟ್ಟವಂತಹವು. ಆದ್ದರಿಂದ ಇವುಗಳನ್ನು ಯಾವಾಗ ಬೇಕಾದರಾವಾಗ ಕತ್ತರಿಸುವಂತಲ್ಲ. ಇದಕ್ಕೆ ಕೆಲವು ನಿಯಮಗಳಿವೆ. ಆ ನಿಯಮದ ಪ್ರಕಾರ ಕತ್ತರಿಸಿದರೆ ಮಾತ್ರ ಶುಭ ಇಲ್ಲವಾದರೆ ದಾರಿದ್ರ್ಯ ನಮ್ಮನ್ನು ಸುತ್ತಿಕೊಳ್ಳುತ್ತದೆಯಂತೆ.






ಮಹಾಭಾರತದಲ್ಲಿ ಉಲ್ಲೇಖಿಸಿದಂತೆ ಉಗುರು ಹಾಗೂ ಕೂದಲನ್ನು ಕತ್ತರಿಸಲು ಸೋಮವಾರ ಯೋಗ್ಯವಲ್ಲವಂತೆ. ಅಂದು ಈ ಕೆಲಸಗಳನ್ನು ಮಾಡಿದರೆ ಮಾನಸಿಕ ಸಮಸ್ಯೆಗಳು ಹಾಗೂ ಸಂತಾನ ಸಮಸ್ಯೆ ಎದುರಾಗುತ್ತವೆ ಎಂದು ಪುರಾಣಗಳು ಹೇಳುತ್ತವೆ. ಮಂಗಳವಾರ ಕ್ಷೌರ ಮಾಡಿಸಿಕೊಳ್ಳುವುದಕ್ಕೂ ಶುಭವಲ್ಲ. ಇದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಗುರುವಾರ ಕೂದಲು ಹಾಗೂ ಉಗುರನ್ನು ಕತ್ತರಿಸಿದರೆ ಜ್ಞಾನ ವೃದ್ಧಿಯಾಗುವುದಿಲ್ಲವಂತೆ. ಹಾಗೇ ಶನಿವಾರ ಕ್ಷೌರ ಮಾಡಿಕೊಂಡರೆ ಸಾವನ್ನು ಬಳಿಗೆ ಕರೆದಂತೆ.ಇನ್ನು ಭಾನುವಾರ ಈ ಕೆಲಸ ಮಾಡುವುದು ಶುಭ ಅಲ್ಲವಂತೆ.


ಆದರೆ ಮಹಾಭಾರತದ ಪ್ರಕಾರ ಬುಧವಾರ ಉಗುರು ಕತ್ತರಿಸಲು ಹಾಗೂ ಕ್ಷೌರಕ್ಕೆ ಉತ್ತಮವಾದ ದಿನ. ಈ ದಿನ ಉಗುರು ಹಾಗೂ ಕೂದಲು ತೆಗೆಯುವುದರಿಂದ ಸಂಪತ್ತು ಜಾಸ್ತಿಯಾಗುವುದಲ್ಲದೇ, ಕುಟುಂಬದಲ್ಲಿ ಶಾಂತಿಯ ಕೂಡ ನೆಲೆಸುತ್ತದೆಯಂತೆ. ಹಾಗೇ ಶುಕ್ರವಾರ ಕೂಡ ಈ ಕೆಲಸಕ್ಕೆ ಒಳ್ಳೆಯದು, ಶುಕ್ರ ದೇವ ಸೌಂದರ್ಯದ ಪ್ರತೀಕ , ಹಾಗಾಗಿ ಅಂದು ದೈಹಿಕ ಸ್ವಚ್ಛತೆ ಮಾಡಿಕೊಂಡರೆ ಶುಕ್ರ ದೇವ ಪ್ರಸನ್ನನಾಗುತ್ತಾನೆ. ಹಾಗೆ ಮನೆಯಲ್ಲಿ ಲಕ್ಷ್ಮೀ ದೇವಿಯೂ ಕೂಡ ನೆಲೆಸುತ್ತಾಳೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ