ಸಿಎಂ ಕುಮಾರಸ್ವಾಮಿ, ರೇವಣ್ಣ ವಿರುದ್ಧ ಗರಂ ಆದ ಎಂಟಿಬಿ ನಾಗರಾಜ್. ಕಾರಣವೇನು?

ಶನಿವಾರ, 13 ಜುಲೈ 2019 (13:25 IST)
ಬೆಂಗಳೂರು : ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರ ಮನೆಗೆ ಸಚಿವ ಡಿಕೆ ಶಿವಕುಮಾರ್ ಅವರು ಬೆಳಿಗ್ಗೆ ಸುಮಾರು 5 ಗಂಟೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಅವರ ಮನವೊಲಿಸಲು ಕಸರತ್ತು ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.




ಈ ವೇಳೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ‘ಮೈತ್ರಿ ಬೇಕಾಗಿರುವುದು ನಿಮಗೆ, ದೇವೇಗೌಡರ ಕುಟುಂಬಕ್ಕೆ, ಡಿಸಿಎಂ ಪರಮೇಶ್ವರ್ ಗೆ. ನಾನು ಹೆಸರಿಗಷ್ಟೇ ಸಚಿವನಾಗಿದ್ದೇನೆ. ವಸತಿ ಇಲಾಖೆಯಲ್ಲಿ ಸಿಎಂ ಕುಮಾರಸ್ವಾಮಿ, ರೇವಣ್ಣ ಹಸ್ತಕ್ಷೇಪ ಮಾಡ್ತಿದ್ದಾರೆ. ನನಗೆ ಗೊತ್ತಿಲ್ಲದೆ ನನ್ನ ಇಲಾಖೆ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ . ರಾಜೀವ್ ವಸತಿ ಯೋಜನೆಯ ಕೆಲಸ ಅರ್ಧಕ್ಕೆ ನಿಂತಿದೆ. ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಿತ್ತು. ಸಿಎಂ ಬಳಿ ಈ ಬಗ್ಗೆ ಕೇಳಿದರೂ ಪ್ರತಿಕ್ರಿಯೆ ನೀಡಿಲ್ಲ’ ಎಂದು ಸಿಎಂ ಕುಮಾರಸ್ವಾಮಿ, ರೇವಣ್ಣ ವಿರುದ್ಧ ಎಂಟಿಬಿ ನಾಗರಾಜ್ ಗರಂ ಆಗಿದ್ದಾರೆ.


ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಹೀಗಾಗಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಅವರು  ಡಿಕೆಶಿ ಅವರಿಗೆ ತಿಳಿಸಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಈ ಬಾರಿ ನನ್ನ ಮನವಿಯನ್ನು ಒಪ್ಪಿಕೊಳ್ಳಿ. ನಾನೇ ಮುಂದೆ ನಿಂತು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇನೆ. ಸಿಎಂ ಕುಮಾರಸ್ವಾಮಿ, ರೇವಣ್ಣ ಬಳಿ ನಾನೇ ಮಾತನಾಡುತ್ತೇನೆ ಎಂದು ಮನವಿ ಮಾಡಿದ್ದರೂ ಕೂಡ ಎಂಟಿಬಿ ನಾಗರಾಜ್ ಮನವೊಲಿಸಲು ಡಿಕೆಶಿ ವಿಫಲರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ