ವಾಸ್ತು ಪ್ರಕಾರ ಡೈನಿಂಗ್ ಟೇಬಲ್ ಅಡುಗೆ ಮನೆಯಲ್ಲಿದ್ದರೆ ಒಳ್ಳೆಯದು. ಯಾಕೆ ಗೊತ್ತಾ?
ಶನಿವಾರ, 6 ಮಾರ್ಚ್ 2021 (07:25 IST)
ಬೆಂಗಳೂರು : ಮನೆ, ಅಡುಗೆ ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುವುದು ಮಾತ್ರವಲ್ಲ ಅಡುಗೆ ಮನೆಯಲ್ಲಿ ಇಡುವ ವಸ್ತುಗಳನ್ನು ಕೂಡ ವಾಸ್ತು ಪ್ರಕಾರ ಜೋಡಿಸಬೇಕು. ಆಗ ಮಾತ್ರ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿರುತ್ತದೆ.
ಹಾಗಾಗಿ ಅಡುಗೆಮನೆಯಲ್ಲಿ ಮಿಕ್ಸರ್, ಗ್ರೈಂಡರ್ ನ್ನು ಆಗ್ನೀಯ ಅಥವಾ ನೈರುತ್ಯ ಮೂಲೆಯಲ್ಲಿ ಇಡಿ. ತೊಳೆದ ಪಾತ್ರೆಗಳನ್ನು ಒಣಗಿಸಿ ಉತ್ತರ ದಿಕ್ಕಿನಲ್ಲಿಡಬೇಕು. ಆಹಾರ ತಯಾರಿಸಿದ ಪಾತ್ರೆಗಳನ್ನು ಉತ್ತರ ದಿಕ್ಕಿನಲ್ಲಿಡಬೇಕು.
ಹಾಗೇ ಡೈನಿಂಗ್ ಟೇಬಲ್ ಅಡುಗೆ ಮನೆಯಲ್ಲಿ ಇರಬೇಕು. ಯಾಕೆಂದರೆ ಅಡುಗೆ ಮನೆಯಲ್ಲಿ ಕುಳಿತು ಊಟ ಮಾಡುವುದರಿಂದ ರಾಹು ದೋಷ ತಗುಲುವುದಿಲ್ಲ. ಕಾರಣ ಅಲ್ಲಿ ಬೆಂಕಿ ಹೊತ್ತಿಸುತ್ತೇವೆ. ಇದರಿಂದ ಆರೋಗ್ಯವಾಗಿರುತ್ತೇವೆ.