ಬೆಂಗಳೂರು : ಅಮಾನತು ಆಗಿದ್ರೂ ಸದನ ಪ್ರವೇಶಿಸಲು ಶಾಸಕ ಸಂಗಮೇಶ್ ಮತ್ತೆ ಯತ್ನಿಸಿದ್ದಾರೆ. ಆದರೆ ಬಾಗಿಲಲ್ಲೇ ಮಾರ್ಷಲ್ ಗಳು ಸಂಗಮೇಶ್ ಅವರನ್ನು ತಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸದನದಲ್ಲಿ ಅಂಗಿ ಬಿಚ್ಚಿದ ಹಿನ್ನಲೆಯಲ್ಲಿ ಶಾಸಕ ಸಂಗಮೇಶ್ ಅವರನ್ನು ಸದನದಿಂದ ಸ್ಪೀಕರ್ ಸಸ್ಪೆಂಡ್ ಮಾಡಿದ್ದಾರೆ. ಹೀಗಾಗಿ ಅಮಾನತು ಆಗಿದ್ರೂ ಸದನಕ್ಕೆ ಬರಲು ಯತ್ನಿಸಿದ್ದು, ಅವರನ್ನು ತಡೆಯಲಾಗಿದೆ.
ಮತ್ತೆ ಸ್ಪೀಕರ್ ವಿರುದ್ಧ ಕಿಡಿಕಾರಿದ ಶಾಸಕ ಸಂಗಮೇಶ್, ಶಾಸಕರ ಅಧಿಕಾರ ಸ್ಪೀಕರ್ ಕಿತ್ತುಕೊಂಡಿದ್ದಾರೆ. ಲಾಂಜ್ ಪ್ರವೇಶಿಸಲೂ ನನ್ನನ್ನು ಬಿಡುತ್ತಿಲ್ಲ. ಇದೇನು ಸ್ಪೀಕರ್ ಆಸ್ತಿನಾ? ಎಂದು ಪ್ರಶ್ನಿಸಿದ್ದಾರೆ.