ಮಂಗಳವಾರ ಆಂಜನೇಯನಿಗೆ ಇದನ್ನು ಅರ್ಪಿಸಿದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ

Krishnaveni K

ಮಂಗಳವಾರ, 18 ಫೆಬ್ರವರಿ 2025 (08:46 IST)
ಬೆಂಗಳೂರು: ಮಂಗಳವಾರದಂದು ಆಂಜನೇಯ ಸ್ವಾಮಿಗೆ ವಿಶೇಷವಾದ ದಿನವಾಗಿದೆ. ಈ ದಿನ ಈ ವಸ್ತುಗಳನ್ನು ಆಂಜನೇಯನಿಗೆ ಅರ್ಪಿಸುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

ಆಂಜನೇಯ ಸ್ವಾಮಿಯು ಸಂಕಟ ನಿವಾರಕ. ಜೀವನದಲ್ಲಿ ಬರುವ ಯಾವುದೇ ಸಮಸ್ಯೆಗಳನ್ನು ಆತ ನಿವಾರಿಸಿ ನಮಗೆ ಅನುಗ್ರಹಿಸುವನು. ಉದ್ಯೋಗ, ಹಣಕಾಸು, ಕೌಟುಂಬಿಕ, ಮಕ್ಕಳ ಯಾವುದೇ ಸಮಸ್ಯೆ ನಿವಾರಣೆಗೂ ಆಂಜನೇಯ ಸ್ವಾಮಿಯ ಅನುಗ್ರಹ ಬೇಕು.

ವಿಶೇಷವಾಗಿ ಮಂಗಳವಾರದಂದು ಆಂಜನೇಯ ಸ್ವಾಮಿಗೆ ಆತನ ಪ್ರಿಯವಾದ ಆಹಾರವಾದ ಬೆಲ್ಲ, ಬಾಳೆಹಣ್ಣು, ಶೇಂಗಾ ನೈವೇದ್ಯವಾಗಿ ನೀಡಬೇಕು. ಇಲ್ಲವೇ ಮಂಗಗಳಿಗೆ ಇವುಗಳನ್ನು ಆಹಾರವಾಗಿ ನೀಡಿದರೂ ಸಾಕು.

 ಈ ರೀತಿ ಪ್ರತೀ ಮಂಗಳವಾರಗಳಂದು ಮಾಡುತ್ತಾ ಬಂದರೆ ಆಂಜನೇಯ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುವಿರಿ. ಜೊತೆಗೆ ನಿಮ್ಮ ಜೀವನದಲ್ಲಿ ಬರುವ ಆರ್ಥಿಕ ಸಮಸ್ಯೆಗಳೂ ದೂರವಾಗುತ್ತದೆ ಎಂಬ ನಂಬಿಕೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ