ಮನೆಯಲ್ಲಿ ಶಂಖವಿದೆಯಾ. ಹಾಗಾದ್ರೆ ಈ ವಿಷಯ ತಿಳಿದಿರಲಿ

ಭಾನುವಾರ, 1 ಜುಲೈ 2018 (10:51 IST)
ಬೆಂಗಳೂರು : ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು. ಇದರಿಂದ ಸುಖ, ಸಮೃದ್ಧಿ ಸಿಗುತ್ತೆ ಎಂಬ ನಂಬಿಕೆ ಇದೆ. ಆದರೆ ಮನೆಯಲ್ಲಿ ಶಂಖ ಇಟ್ಟುಕೊಂಡಿರುವವರು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.


*ಶಂಖವನ್ನು ಯಾವಾಗಲೂ ನೀರಿನಲ್ಲಿ ಇಡಬಾರದು.

*ಹಾಗೆಯೇ ಭೂಮಿಯ ಮೇಲೆ ಶಂಖವನ್ನು ಇಡಬಾರದು. ಸ್ವಚ್ಛವಾದ ಬಟ್ಟೆ ಮೇಲೆ ಶಂಖವನ್ನು ಇಡಬೇಕು.

*ಶಂಖದೊಳಗೆ ನೀರನ್ನು ಹಾಕಿ ಇಡಬಾರದು. ಪೂಜೆ ಮಾಡುವ ವೇಳೆ ಶಂಖಕ್ಕೆ ನೀರು ಹಾಕಿ ಪೂಜೆ ಮಾಡುತ್ತಾರೆ. ನಂತರ ಆ ನೀರನ್ನು ಕುಡಿಯುವುದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಜೀವನದಲ್ಲಿ ಅದೃಷ್ಟ ಒಲಿದು ಬರುತ್ತದೆ.

*ಪೂಜೆ ಮಾಡುವ ವೇಳೆ ಶಂಖದ ತೆರೆದ ಭಾಗ ಮೇಲೆ ಬರುವಂತೆ ಇಡಬೇಕು.

*ವಿಷ್ಣು, ಲಕ್ಷ್ಮಿ, ಬಾಲ ಗಣಪತಿಯ ಬಲಭಾಗಕ್ಕೆ ಶಂಖವನ್ನು ಇಡಬೇಕು.

*ಶಂಖವನ್ನು ಲಕ್ಷ್ಮಿಗೆ ಹೋಲಿಸುತ್ತಾರೆ. ಹಾಗಾಗಿ ಉಳಿದ ದೇವರಿಗೆ ಮಾಡುವಂತೆ ಶಂಖಕ್ಕೂ ಪೂಜೆ ಮಾಡಬೇಕು.

*ಶಂಖದ ಧ್ವನಿಯಿಂದ ಮನೆಯಲ್ಲಿ ಧನಾತ್ಮಕ ಗುಣ ವೃದ್ಧಿಯಾಗುತ್ತದೆ. ಹಾಗಾಗಿ ಪ್ರತಿದಿನ ಮನೆಯಲ್ಲಿ ಶಂಖ ಊದಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ