ಬೆಂಗಳೂರು: ಕರಾರುವಾಕ್ ಭವಿಷ್ಯವಾಣಿಗೆ ಹೆಸರಾಗಿರುವ ಬಲ್ಗೇರಿಯಾದ ಬಾಬಾ ವಂಗಾರ ಮುಂದಿನ ವರ್ಷದ ಭವಿಷ್ಯವಾಣಿಯಲ್ಲಿ ಶಾಕಿಂಗ್ ವಿಚಾರಗಳು ಹೊರಬಿದ್ದಿವೆ. ಬಾಬಾ ವಂಗಾ ಲೇಟೆಸ್ಟ್ ಭವಿಷ್ಯವಾಣಿಯ ಮಾಹಿತಿ ಇಲ್ಲಿದೆ.
ಇತ್ತೀಚೆಗಷ್ಟೇ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುವ ಬಗ್ಗೆ ಬಾಬಾ ವಂಗಾ ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಕೆಲವೇ ದಿನಗಳ ಹಿಂದೆ ಮುಂದಿನ ವರ್ಷ ಮೂರು ರಾಶಿಯವರಿಗೆ ಶನಿ ಅದೃಷ್ಟ ತರಲಿದ್ದಾನೆ ಎಂದು ಬಾಬಾ ವಂಗಾ ಖುಷಿ ವಿಚಾರ ಹೇಳಿದ್ದರು. ಆದರೆ ಈಗ ಆತಂಕ ತರುವ ಭವಿಷ್ಯವೊಂದು ಹೊರಬಿದ್ದಿದೆ.
ಬಾಬಾ ವಂಗಾ ಪ್ರಕಾರ ಮುಂದಿನ ವರ್ಷ ಅಂದರೆ 2025 ಅತ್ಯಂತ ವಿನಾಶಕಾರೀ ಘಟನೆಗಳು ನಡೆಯಲಿವೆ ಎಂದಿದ್ದಾರೆ. ಮುಂದಿನ ವರ್ಷ ಆಂತರಿಕ ಕಲಹ, ಭೀಕರ ಯುದ್ಧ ನಡೆಯಲಿದೆ ಎಂದಿದ್ದಾರೆ. ಇದರಿಂದಾಗಿ ಯುರೋಪ ಅವನತಿಯತ್ತ ಸಾಗಲಿದೆ ಎಂದಿದ್ದಾರೆ. ಯುರೋಪ್ ನಲ್ಲಿ ಜನಸಂಖ್ಯೆ ಕುಸಿತವಾಗಿ ಇಡೀ ಜಗತ್ತೇ ವಿನಾಶತ್ತ ಸಾಗಲಿದೆ ಎಂದಿದ್ದಾರೆ.
1966 ರಲ್ಲೇ ಬಾಬಾ ವಂಗಾ ತೀರಿಕೊಂಡಿದ್ದಾರೆ. ಆದರೆ ಅವರು 51 ನೇ ಶತಮಾನದವರೆಗೆ ಏನೆಲ್ಲಾ ನಡೆಯಬಹುದು ಎಂದು ಭವಿಷ್ಯ ಬರೆದಿದ್ದಾರೆ. ಈಗ ಅವರ ಒಂದೊಂದೇ ಭವಿಷ್ಯಗಳು ಹೊರಬೀಳುತ್ತಿವೆ. ಇದರಲ್ಲಿ ಬಹುತೇಕ ನಿಜವಾಗಿದ್ದು ಇದೆ. ಹೀಗಾಗಿ ಬಾಬಾ ವಂಗಾ ಭವಿಷ್ಯವಾಣಿ ಜನಪ್ರಿಯವಾಗಿದೆ.