ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

Krishnaveni K

ಶನಿವಾರ, 2 ಆಗಸ್ಟ್ 2025 (08:22 IST)
ಇಂದು ಶನಿವಾರವಾಗಿದ್ದು ಶನಿ ದೇವನ ಪೂಜೆಗೆ ಸೂಕ್ತವಾದ ದಿನವಾಗಿದೆ. ವಿಶೇಷವಾಗಿ ಶನಿ ದೋಷವಿರುವವರು ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ ಪೂಜೆ ಮಾಡಿ.

ಶನಿ ನ್ಯಾಯಕಾರಕನಾಗಿದ್ದು ನಮ್ಮ ಕರ್ಮಫಲಗಳಿಗೆ ಅನುಸಾರವಾಗಿ ಶಿಕ್ಷೆ ಕೊಡುತ್ತಾನೆ. ಶನಿ ದೋಷದಿಂದ ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳು ಎದುರಾಗುತ್ತವೆ. ಮಾನಸಿಕವಾಗಿ ಕ್ಷೋಭೆ, ದೈಹಿಕವಾಗಿ ನೋವು ಅನುಭವಿಸಬೇಕಾಗುತ್ತದೆ.

ಹೀಗಾಗಿ ಶನಿವಾರ ಶನಿದೋಷದ ಪ್ರಭಾವ ತಗ್ಗಿಸಲು ಶನಿದೇವನಿಗೆ ಈ ಒಂದು ಮಂತ್ರವನ್ನು ಜಪಿಸುತ್ತಾ ಪೂಜೆ ಮಾಡಬೇಕು. ಈ ಮೂರು ಮಂತ್ರವನ್ನು ಇಂದು ಜಪಿಸಿ ಶನಿ ದೇವನ ಪೂಜೆ ಮಾಡುವುದರಿಂದ ಶನಿ ದೋಷಗಳು ನಿವಾರಣೆಯಾಗುವುದು.

 
ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ
ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ

ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ



ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ