ಕಾಲಿಗೆ ಚಿನ್ನದ ಆಭರಣ ಧರಿಸುವವರು ಈ ದೇವರ ಕೋಪಕ್ಕೆ ಗುರಿಯಾಗುತ್ತಾರೆ ಎಚ್ಚರಿಕೆ!

ಬುಧವಾರ, 11 ಜುಲೈ 2018 (07:33 IST)
ಬೆಂಗಳೂರು : ಸಾಮಾನ್ಯವಾಗಿ ಮಹಿಳೆಯರು ಕಾಲಿಗೆ ಬೆಳ್ಳಿ ಆಭರಣವನ್ನು ಧರಿಸುತ್ತಾರೆ. ಆದರೆ ಕೆಲವರು ಶೋಕಿಗಾಗಿ ಚಿನ್ನದ ಆಭರಣವನ್ನು ಕಾಲಿಗೆ ಧರಿಸಲು ಶುರುಮಾಡಿದ್ದಾರೆ. ಆದರೆ ಈ ರೀತಿ  ಮಾಡಬಾರದು ಎಂದು ಹೇಳುತ್ತಾರೆ. ಇದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ.


ಧಾರ್ಮಿಕ ಕಾರಣವೆನೆಂದರೆ ಭಗವಂತ ಶ್ರೀಕೃಷ್ಣನಿಗೆ ಹಳದಿ ಬಣ್ಣ ಪ್ರಿಯವಂತೆ. ಬಂಗಾರ ಹಳದಿ ಬಣ್ಣದಲ್ಲಿರುತ್ತದೆ. ಹಾಗಾಗಿ ಬಂಗಾರವನ್ನು ಕಾಲಿಗೆ ಧರಿಸಬಾರದು. ಬಂಗಾರವನ್ನು ಕಾಲಿಗೆ ಧರಿಸಿದ್ರೆ ಕೃಷ್ಣ ಕೋಪಗೊಳ್ತಾನೆ ಎಂದು ನಂಬಲಾಗಿದೆ.


ಹಾಗೇ ವಿಜ್ಞಾನಿಗಳು ಕೂಡ ಕಾಲಿಗೆ ಬಂಗಾರ ಅಥವಾ ಬಂಗಾರದಿಂದ ಮಾಡಿದ ಯಾವುದೇ ಆಭರಣವನ್ನು ಧರಿಸಬೇಡಿ ಎನ್ನುತ್ತಾರೆ. ಕಾರಣ ಬಂಗಾರ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಕಾಲಿಗೆ ಬಂಗಾರ ಅಥವಾ ಬಂಗಾರದ ಆಭರಣ ಹಾಕುವುದ್ರಿಂದ ಕಾಲಿನಿಂದ ತಲೆಯವರೆಗೆ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ಮಾನಸಿಕ ಏಕಾಗ್ರತೆಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಬಂಗಾರದ ಆಭರಣವನ್ನು ಕಾಲಿಗೆ ಹಾಕಬೇಡಿ ಎಂದು ವಿಜ್ಞಾನಿಗಳು ಸಲಹೆ ನೀಡುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ