ಅಡುಗೆ ಸೋಡಾದಿಂದ ಕ್ಯಾನ್ಸರ್ ಗುಣಪಡಿಸಬಹುದಂತೆ. ಹೇಗೆಂಬುದನ್ನು ತಿಳಿಬೇಕಾ?

ಮಂಗಳವಾರ, 10 ಜುಲೈ 2018 (07:44 IST)
ಬೆಂಗಳೂರು : ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಎಂದರೆ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಆಗಿವೆ. ಪುರುಷರಲ್ಲಿ ಪ್ರಾಸ್ಟೇಟ್, ಶ್ವಾಸಕೋಶ ಹಾಗೂ ಕರುಳಿನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ಇದರ ಹೊರತಾಗಿ ಗರ್ಭಕೋಶ, ಮೂತ್ರಪಿಂಡ ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಸಹಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಬರುತ್ತಿದೆ.


ಕ್ಯಾನ್ಸರ್ ಆವರಿಸಲು ಹಲವಾರು ಅಂಶಗಳು ಪೂರಕವಾಗಿವೆ. ಧೂಮಪಾನ, ಸ್ಥೂಲಕಾಯ, ಮದ್ಯಪಾನ, ಅನಾರೋಗ್ಯಕರ ಜೀವನಕ್ರಮ ಮೊದಲಾದವು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದಕ್ಕೊಂದು ಸರಳ ಪರಿಹಾರವಿದೆ,
ಅದೆಂದರೆ, ನೀರಿನಲ್ಲಿ ಅಡುಗೆ ಸೋಡಾ ಬೆರೆಸಿ ಕುಡಿಯುವ ಮೂಲಕ ದೇಹದಲ್ಲಿ ಈಗಾಗಲೇ ಬೆಳೆಯಲು ಆರಂಭಿಸಿದ್ದ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ಹೊಸ ಸಂಶೋಧನೆಯಲ್ಲಿ ಅಡುಗೆ ಸೋಡಾ ಕೆಲವು ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆಗೆ ತಡೆಯೊಡ್ಡಿ ಕೊಲ್ಲುವ ಮೂಲಕ ಕ್ಯಾನ್ಸರ್ ಗುಣಪಡಿಸಲು ಸಾಧ್ಯ ಎಂದು ಕಂಡುಕೊಳ್ಳಲಾಗಿದೆ.


ಅಲ್ಲದೇ ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಪೀಡಿತ ಅಂಗಾಂಶ ಸಾಕಷ್ಟು ಬೆಳೆದಿದ್ದರೆ ಅಡುಗೆ ಸೋಡಾ ಈ ಜೀವಕೋಶಗಳಿಗೆ ಪ್ರಚೋದನೆ ನೀಡುವ ಮೂಲಕ ಕ್ಯಾನ್ಸರ್ ನ ಇರುವಿಕೆಯನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಮಾಡುತ್ತದೆ ಅಲ್ಲದೇ ಬೆಳವಣಿಗೆಯ ಗತಿಯನ್ನು ನಿಧಾನಗೊಳಿಸುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ