ತೆಂಗಿನಕಾಯಿಯಿಂದ ನಿಮ್ಮ ಸಮಸ್ಯೆಗೆ ಹೇಗೆಲ್ಲಾ ಪರಿಹಾರ ಸಿಗಲಿದೆ ಗೊತ್ತಾ...?

ಬುಧವಾರ, 7 ಮಾರ್ಚ್ 2018 (07:58 IST)
ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ತೆಂಗಿನ ಕಾಯಿಗೆ ಹೆಚ್ಚಿನ ಪ್ರಾಶಸ್ತ ನೀಡಲಾಗುತ್ತದೆ. ಯಾವುದೇ ಶುಭ ಸಮಾರಂಭದಲ್ಲಿ ತೆಂಗಿನ ಕಾಯಿ ಇದ್ದೇ ಇರುತ್ತದೆ.  ತೆಂಗಿನಕಾಯಿ ಮಂಗಳಕರ ವಸ್ತುವಾಗಿದೆ. ಯಾವ ರೀತಿ ತೆಂಗಿನಕಾಯಿ ಬಳಸಿದರೆ ನಮ್ಮ ಜೀವನದಲ್ಲಿ ಉತ್ತಮವಾಗಿ ಇರಬಹುದು ಎಂಬುದರ ಕುರಿತು ಇಲ್ಲಿದೆ ನೋಡಿ.


ನಿಮ್ಮ ಜೀವನದಲ್ಲಿ ಗೆಲುವು ಪಡೆಯಬೇಕೆಂದರೆ ದೇವರ ಮುಂದೆ ತೆಂಗಿನಕಾಯಿ ಇಟ್ಟು ಅದರ ಮೇಲೆ ಒಂದು ಕೆಂಪು ಹೂವನ್ನು ಇಟ್ಟು ಪೂಜೆ ಮಾಡಿ. ತೆಂಗಿನಕಾಯಿ ಮೇಲೆ ಇರುವ ಹೂವನ್ನು ನಿಮ್ಮ ಜತೆಗೆ ತೆಗೆದುಕೊಂಡು ಹೋದರೆ ನೀವು ಸಾಧಿಸಬೇಕೆಂದುಕೊಂಡ ಕೆಲಸ ಜಯಶಾಲಿಯಾಗುತ್ತದೆ.


ಮನೆಯಲ್ಲಿ ಯಾರ ಮೇಲಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ, ಒಂಧು ತೆಂಗಿನಕಾಯಿಗೆ ಕೆಂಪು ಬಟ್ಟೆ ಕಟ್ಟಿ ಆ ವ್ಯಕ್ತಿಗೆ ಇದರಿಂದ ಏಳು ಬಾರಿ ದೃಷ್ಟಿ ತೆಗೆದು ಆ ತೆಂಗಿನಕಾಯಿಯನ್ನು ಹನುಮಂತನ ಕಾಲ ಬಳಿ ಇಡಿ.


ಇನ್ನು ಶನಿ ಕಾಟವಿದ್ದವರು ಒಂದು ತೆಂಗಿನಕಾಯಿ ತೆಗೆದುಕೊಂಡು ನದಿಯಲ್ಲಿ ಓಂ ರಾಮದೂತಾಯ ನಮಃ ಎಂದು ಮಂತ್ರ ಹೇಳಿ ತೆಂಗಿನಕಾಯಿಯನ್ನು ನೀರಿನಲ್ಲಿ ಮುಳುಗಿಸಿದರೆ ಶನಿಯ ಕಾಟದಿಂದ ತಪ್ಪಿಸಿಕೊಳ್ಳಬಹುದಂತೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ