ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಮನೆಗೆ ಲಕ್ಷ್ಮೀ ದೇವಿ ಬಂದು ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಯಾವೆಲ್ಲಾ ವಸ್ತುಗಳು ಶುಭ ಎಂದು ಇಲ್ಲಿ ನೋಡಿ.
ಅಕ್ಟೋಬರ್ 20 ರಿಂದ 22 ರವರೆಗೆ ಈ ಬಾರಿ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಪೂಜೆ, ಗೋ ಪೂಜೆ ಮಾಡುವುದು ವಾಡಿಕೆ. ಮನೆ ಮನೆಗಳಲ್ಲಿ ದೀಪ ಬೆಳಗಿ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ.
ದೀಪಾವಳಿ ಎನ್ನುವುದು ಅತ್ಯಂತ ಶುಭ ಸಮಯವಾಗಿದೆ. ಈ ಸಂದರ್ಭದಲ್ಲಿ ಮನೆಗೆ ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸಿ ತರುವುದು ಶುಭಕರ. ಚಿನ್ನ, ಬೆಳ್ಳಿ ಖರೀದಿಸಲು ಅನುಕೂಲವಿಲ್ಲದಿದ್ದರೆ ಪುಟ್ಟ ಹಣತೆಗಳನ್ನು ತರುವುದೂ ಶ್ರೇಯಸ್ಸು ತರುತ್ತದೆ.
ಅದೇ ರೀತಿ ಕಮಲದ ಹೂ, ಕನ್ನಡಿ, ಗಾಜಿನ ಬಳೆಗಳು, ಪೊರಕೆ, ತಾಮ್ರದ ಪಾತ್ರೆ, ಸ್ಟೀಲ್ ಪಾತ್ರೆ, ಹಿತ್ತಾಳೆಯ ಪಾತ್ರೆಗಳನ್ನು ಮನೆಗೆ ತರುವುದು ಶುಭಕರವಾಗಿದೆ. ಈ ವಸ್ತುಗಳನ್ನು ತರುವುದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.