Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಚಿಂತೆ ಬೇಡ

Krishnaveni K

ಮಂಗಳವಾರ, 26 ನವೆಂಬರ್ 2024 (08:54 IST)
ಬೆಂಗಳೂರು: 2025 ರಲ್ಲಿ ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಉತ್ತಮ ಫಲಗಳನ್ನು ಕಾಣುವ ಯೋಗ. ಈ ವರ್ಷ ನಿಮ್ಮ ಕೌಟುಂಬಿಕ ಸಂಬಂಧಗಳು, ಸ್ಥಿತಿ ಗತಿ ಸ್ಥಿರವಾಗಿರಲಿದೆ.

ಹಾಗಂತ ಈ ವರ್ಷ ಯಾವುದೇ ಸಮಸ್ಯೆಯೇ ಬಾರದು ಎಂದಲ್ಲ. ಸಮಸ್ಯೆಗಳಿದ್ದರೂ ಅದನ್ನು ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯ ನಿಮಗೆ ಬರುವುದು. ನಿಮ್ಮ ಸಕಾರಾತ್ಮಕ ವರ್ತನೆಯಿಂದ ಕುಟುಂಬದ ಅಶಾಂತಿಯನ್ನು ಹೋಗಲಾಡಿಸಿ ಎಲ್ಲರಿಗೂ ಬೆಂಬಲವಾಗಿ, ಶಕ್ತಿಯಾಗಿ ನಿಲ್ಲಲಿದ್ದೀರಿ.

ವರ್ಷದ ಆರಂಭದಲ್ಲಿ ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಆದರೆ ಜೂನ್ ಬಳಿಕ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದ್ದು, ಕುಟುಂಬದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ.

ವರ್ಷದ ಮಧ್ಯಾವಧಿಯಲ್ಲಿ ಪ್ರೀತಿ-ಪಾತ್ರರೊಂದಿಗೆ ಅಥವಾ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆ. ಸಂಗಾತಿಯು ನಿಮ್ಮ ಮಾತನ್ನು ಕೇಳದೇ ಹೋಗಬಹುದು. ಅವರೊಂದಿಗಿನ ಮನಸ್ತಾಪದಿಂದಾಗಿ ಮಾನಸಿಕವಾಗಿ ಚಿಂತೆ ಕಾಡೀತು. ಅಲ್ಲದೆ ಆರೋಗ್ಯ ಸಂಬಂಧವಾಗಿ ಕೆಲವೊಂದು ಸಮಸ್ಯೆಗಳೂ ಇರಲಿವೆ.

ಆದರೆ ವರ್ಷಾಂತ್ಯದಲ್ಲಿ ಸಮಸ್ಯೆಗಳು ನಿವಾರಣೆಯಾಗಲಿದ್ದು, ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಸೃಷ್ಟಿಯಾಗಲಿದೆ. ಕೆಲಸದ ನಿಮಿತ್ತ ಪರ ಊರಿಗೆ ಸಂಚರಿಸುವ ಸಾಧ್ಯತೆಗಳಿವೆ. ಮಕ್ಕಳು, ಸಂಗಾತಿಯಿಂದ ಬೆಂಬಲ ನಿರೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ