ಮನಸ್ಸು ಶಾಂತಗೊಳ್ಳಲು ಈ ಎರಡು ಮಂತ್ರಗಳನ್ನು ಪಠಿಸಿ

Krishnaveni K

ಮಂಗಳವಾರ, 11 ಜೂನ್ 2024 (08:29 IST)
ಬೆಂಗಳೂರು: ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ಅನೇಕರಿಗೆ ಹಲವಾರು ರೀತಿಯ ಮಾನಸಿಕ ಒತ್ತಡಗಳಿರುತ್ತವೆ. ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆದು ಮನಸ್ಸು ಶಾಂತವಾಗಲು ಈ ಎರಡು ಪವರ್ ಫುಲ್ ಮಂತ್ರಗಳನ್ನು ಪಠಿಸಿ.

ಎಲ್ಲಕ್ಕಿಂತ ಮುಖ್ಯವಾಗಿ ಎಂದಿನ ಗೌಜಿ ಗದ್ದಲದ ಬದುಕಿನಿಂದ ದೂರವಾಗಿ ಕೆಲವು ಹೊತ್ತು ಶಾಂತವಾಗಿ ಕೂತು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಓಂಕಾರ ಮಂತ್ರದೊಂದಿಗೆ ಪ್ರತಿನಿತ್ಯ ಕೆಲವು ಹೊತ್ತು ಶಾಂತ ಮನಸ್ಸಿನಲ್ಲಿ ಧ್ಯಾನಕ್ಕೆ ಕೂರುವುದು ಉತ್ತಮ.

ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸಲು ಭಗವಾನ್ ಶಿವನನ್ನು ಆರಾಧಿಸುವುದು ಉತ್ತಮ. ಇದಕ್ಕಾಗಿ ಶಾಂತಿಯುತ ಪರಿಸರದಲ್ಲಿ ಕುಳಿತು ಓಂ ಭಗವತೇ ರುದ್ರಾಯ ಮಂತ್ರವನ್ನು ಪಠಿಸುತ್ತಾ ಧ್ಯಾನ ಮಾಡಿ. ಮನಸ್ಸು ಶಾಂತವಾಗುವವರೆಗೂ ಈ ರೀತಿ ತಪೋಭಂಗಿಯಲ್ಲಿ ಕುಳಿತು ಧ್ಯಾನ ಮಾಡಬಹುದು.

ಇಲ್ಲದೇ ಹೋದರೆ ‘ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ, ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ. ಲಕ್ಷ್ಮೀಕಾಂತಂ ಕಮಲನಯನಂ ಯೋಗಿ ಹೃದ್ಯಾನಗಮ್ಯಂ, ವಂದೇ ವಿಷ್ಣುಂ ಭವ ಭಯ ಹರಂ ಸರ್ವಲೋಕೈಕನಾಥಮ್. ಎನ್ನುವ ಶ್ಲೋಕವನ್ನು ಪ್ರತಿನಿತ್ಯ ಪಠಿಸುತ್ತಾ ಧ್ಯಾನ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ