ಹನುಮಾನ್ ಚಾಲೀಸಾ ಓದಲು ಕಷ್ಟವಾಗುತ್ತಿದ್ದರೆ ಈ ಮಂತ್ರ ಪಠಿಸಿ

Krishnaveni K

ಸೋಮವಾರ, 10 ಜೂನ್ 2024 (09:09 IST)
Photo Credit: X
ಬೆಂಗಳೂರು: ಪ್ರತಿನಿತ್ಯ ಹನುಮಾನ್ ಚಾಲೀಸಾ ಓದುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸುತ್ತೀರಿ ಎಂಬ ನಂಬಿಕೆಯಿದೆ.ಆದರೆ ಕೆಲವರಿಗೆ ಹನುಮಾನ್ ಚಾಲೀಸಾ ಓದಲು ಕಷ್ಟವಾಗುತ್ತದೆ. ಅದರ ಬದಲು ಹನುಮಂತನ ಪ್ರಾರ್ಥನೆಗೆ ಏನು ಮಾಡಬಹುದು ಇಲ್ಲಿ ನೋಡಿ.

ಹನುಮಾನ್ ಚಾಲೀಸಾ ಓದುವುದರಿಂದ ನಿರುದ್ಯೋಗ ಸಮಸ್ಯೆ, ಉದ್ಯೋಗದಲ್ಲಿ ಅಡೆತಡೆಗಳು, ಶತ್ರುಭಯ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಜೀವನದ ಸಮಸ್ಯೆಗಳಿಂದ ಪಾರಾಗಬಹುದು. ಹೊಸ ಕೆಲಸವನ್ನು ಮಾಡುವ ಉತ್ಸಾಹ ಮೂಡಿಸಲು ಹನುಮಾನ್ ಚಾಲೀಸಾ ಪಠಣೆ ಮಾಡುವುದು ಉತ್ತಮ.

ಆದರೆ ಕೆಲವರಿಗೆ ಹನುಮಾಮನ್ ಚಾಲೀಸಾ ಓದಲು ಕಷ್ಟವೆನಿಸಬಹುದು. ಅದರ ಕೆಲವು ಪದಗಳನ್ನು ಸರಿಯಾಗಿ ಹೇಳಲು ಆಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಆಂಜನೇಯ ಸ್ವಾಮಿಯ ಪ್ರಾರ್ಥನೆಗಾಗಿ ನಾವು ಒಂದು ಸರಳ ಆಂಜನೇಯ ಜಪವನ್ನು ಮಾಡಬಹುದು.

‘ಓಂ ಹನುಮತೇ ನಮಃ’ ಎನ್ನುವ ಸಿಂಪಲ್ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸುತ್ತಿದ್ದರೆ ಜೀವನದಲ್ಲಿ ಕಷ್ಟ-ನಷ್ಟಗಳು ದೂರವಾಗಿ ಯಶಸ್ಸು ಪಡೆಯಬಹುದಾಗಿದೆ. ಜೊತೆಗೆ ರಾಮ ತಾರಕ ಮಂತ್ರ ಹೇಳುತ್ತಿದ್ದರೆ ಆಂಜನೇಯ ಸ್ವಾಮಿ ಪ್ರಸನನ್ನಾಗಿ ಬೇಡಿದ ವರವನ್ನು ನೀಡುತ್ತಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ