ಆಂಜನೇಯ ಸ್ವಾಮಿ ನಮ್ಮಲ್ಲಿ ಭಯ ದೂರ ಮಾಡಿ ಹೊಸದನ್ನು ಸಾಧಿಸಲು, ಕಲಿಯುವ ಉತ್ಸಾಹ ಕೊಡುವನಲ್ಲದೆ, ಕೀರ್ತಿವಂತನಾಗಿ ಮಾಡುತ್ತಾನೆ. ಹಾಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಹನುಮನ ಮಂತ್ರವನ್ನು ಪಠಿಸುವುದನ್ನು ಹೇಳಿಕೊಡಿ. ಅದರಲ್ಲೂ ವಿಶೇಷವಾಗಿ ಈ ಶ್ಲೋಕ ಪಠಿಸಲು ಹೇಳಿ. ಅದು ಹೀಗಿದೆ:
ಅತುಲಿತಬಲಧಾಮಂ ಹೇಮಶೈಲಾಭದೇಹಂ ಅನುಜವಾನಕೃಷಾನುಂ ಜ್ಞಾನಾಮಗ್ರಗಣ್ಯಂ
ಸಕಲಗುಣನಿಧಾನಂ ವಾನರಾಣಾಮಧೀಶಂ, ರಘುಪತಿಪ್ರಿಯಭಕ್ತಂ ವಾತಜಾತಂ ನಮಾಮಿ
ಮನೋಜನವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿ ಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಧ ಮುಖ್ಯಂ ಶ್ರೀರಾಮ ಧೂತಂ ಶರಣಂ ಪ್ರಪದ್ಯೇ
ಈ ಮಂತ್ರವನ್ನು ಮಕ್ಕಳು ಪ್ರತಿನಿತ್ಯ ಪಠಿಸುವುದರಿಂದ ಅವರ ಏಕಾಗ್ರತೆ ಹೆಚ್ಚುವುದಲ್ಲದೆ, ಮನಸ್ಸಿನಲ್ಲಿರುವ ಭಯ ನಾಶವಾಗಿ ಹೊಸದನ್ನು ಸಾಧಿಸುವ ಉತ್ಸಾಹ ಮೂಡುತ್ತದೆ. ಅಲ್ಲದೆ, ಅವರು ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಕೀರ್ತಿವಂತರಾಗುತ್ತಾರೆ.