ಹಣಕಾಸಿನ ಅಭಿವೃದ್ಧಿಗಾಗಿ ಪ್ರತಿನಿತ್ಯ ಈ ಎರಡು ಲಕ್ಷ್ಮೀ ಮಂತ್ರ ಪಠಿಸಿ

Krishnaveni K

ಶುಕ್ರವಾರ, 30 ಆಗಸ್ಟ್ 2024 (08:50 IST)
ಬೆಂಗಳೂರು: ಲಕ್ಷ್ಮೀ ಎಂದರೆ ಧನ, ಧಾನ್ಯ, ಸಮೃದ್ಧಿಯ ಅಧಿದೇವತೆ. ಆಕೆ ಒಲಿದರೆ ಜೀವನದಲ್ಲಿ ಯಾವ ಕಷ್ಟವೂ ಬರಲ್ಲ. ಹಾಗಿದ್ದರೆ ಲಕ್ಷ್ಮಿಯ ಕೃಪಾಕಟಾಕ್ಷ ಸಿಗಬೇಕಾದರೆ ಪ್ರತಿನಿತ್ಯ ಈ ಎರಡು ಮಂತ್ರ ಪಠಿಸುವುದನ್ನು ಮರೆಯಬೇಡಿ.

ಇಂದು ಶುಕ್ರವಾರವಾಗಿದ್ದು, ಲಕ್ಷ್ಮೀ ದೇವಿಯ ದಿನವಾಗಿದೆ. ಈ ದಿನ ಲಕ್ಷ್ಮೀ ದೇವಿಯನ್ನು ಆರಾಧಿಸುವುದರಿಂದ ವಿಶೇಷವಾಗಿ ಆಕೆಯ ಕೃಪೆಗೆ ಪಾತ್ರರಾಗುತ್ತೀರಿ. ಅದರಲ್ಲೂ ಸಂಜೆ ವೇಳೆ ಮನೆಯಲ್ಲಿ ದೀಪ ಹಚ್ಚಿ ಲಕ್ಷ್ಮೀ ದೇವಿಯ ಸ್ತೋತ್ರ ಪಠಿಸುವುದರಿಂದ ಹಣಕಾಸಿನ ಅಭಿವೃದ್ಧಿ, ಸುಖ, ಶಾಂತಿ ಮತ್ತು ಸಂತೋಷ ವೃದ್ಧಿಯಾಗುವುದು.

‘ಮಹಾಲಕ್ಷ್ಮಿ ಚ ವಿದ್ಮಹೇ
ವಿಷ್ಣುಪತ್ನೀ ಚ ಧೀಮಹಿ
ತನ್ನೋ ಲಕ್ಷ್ಮೀ ಪ್ರಚೋದಯಾತ್’

ಸಂಜೆ ಹೊತ್ತು ಮಡಿಯಲ್ಲಿ ಪದ್ಮಾಸನ ಹಾಕಿ ಕುಳಿತು ಕೆಂಪು ಅಕ್ಷತೆ ಮತ್ತು ಹೂ ದೇವಿಗೆ ಅರ್ಪಿಸುತ್ತಾ ಈ ಮಂತ್ರವನ್ನು ಹೇಳುವುದರಿಂದ ಸಮೃದ್ಧಿ ಕಾಣುತ್ತೀರಿ. ಇದಲ್ಲದೆ ಹೋದರೆ ಈ ಮಂತ್ರವನ್ನೂ ಜಪಿಸಬಹುದು.

‘ಓಂ ಶ್ರೀಂ ಶ್ರೀಂ ಮಹಾಲಕ್ಷ್ಮೈ ಶ್ರೀಂ ಶ್ರೀಂ ಓಂ ನಮಃ’

ಎನ್ನುವ ಮಂತ್ರವನ್ನು ಪ್ರತಿನಿತ್ಯ ಸಂಜೆ ಹೊತ್ತು ಭಕ್ತಿಯಿಂದ ಜಪಿಸುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ ಧನಾಭಿವೃದ್ಧಿ ಪಡೆಯುತ್ತೀರಿ. ಪೂಜೆಯ ನಂತರ ದೇವಿಗೆ ನೈವೇದ್ಯ ಮತ್ತು ಆರತಿ ಬೆಳಗುವುದನ್ನು ನೋಡಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ