ಬೆಂಗಳೂರು: ಮಹಾವಿಷ್ಣುವಿನ ಸಹಸ್ರನಾಮಾವಳಿಯನ್ನು ಪ್ರತಿನಿತ್ಯ ಓದುವುದರಿಂದ ನಮಗೆ ಅನೇಕ ಫಲ ಸಿಗುವುದು. ಆದರೆ ವಿಷ್ಣುಸಹಸ್ರನಾಮವನ್ನು ಯಾವಾಗ ಓದಬೇಕು ಮತ್ತು ಏನು ಫಲ ಎಂದು ತಿಳಿಯಿರಿ.
ವಿಷ್ಣು ಸಹಸ್ರನಾಮವನ್ನು ಮುಂಜಾನೆ ಅಥವಾ ಮುಸ್ಸಂಜನೆಯ ಹೊತ್ತಿನಲ್ಲಿ ಪಾರಾಯಣ ಮಾಡುವುದು ಪ್ರಶಸ್ತವಾಗಿದೆ. ಇದನ್ನು ಓದುವಾಗ ಮನಸ್ಸು ಮತ್ತು ದೇಹ ಶುದ್ಧವಾಗಿರುವುದು ಮುಖ್ಯ. ನೀರು ತುಂಬಿದ ಕಲಶದ ಮೇಲೆ ವೀಳ್ಯದೆಲೆ, ತೆಂಗಿನಕಾಯಿಯನ್ನು ಇಟ್ಟು ಅದರ ಎದುರು ಕೂತು ಮಡಿಯಲ್ಲಿ ಭಕ್ತಿಯಿಂದ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ವಿಷ್ಣು ಸಹಸ್ರನಾಮ ಅತ್ಯಂತ ಪ್ರಭಾವಶಾಲಿಯಾಗಿದ್ದು, ಇದನ್ನು ಪಠಿಸುವುದರಿಂದ ಅನೇಕ ಶುಭ ಫಲಗಳು ನಿಮ್ಮದಾಗಬಹುದು. ವಿಷ್ಣು ಸಹಸ್ರನಾಮಾವಳಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಚೈತನ್ಯ ತುಂಬುತ್ತದೆ. ಏಕಾಗ್ರತೆಯಿಂದ ಓದುವುದರಿಂದ ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.
ನಿದ್ರಾಹೀನತೆಯಿಂದ ಬಳಲುತ್ತಿರುವವರು, ಮಾನಸಿಕವಾಗಿ ಭಯ, ಖಿನ್ನತೆ, ಗರ್ಭಿಣಿಯರು, ಶತ್ರುಭಯವಿರುವವರು ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಓದುವುದರಿಂದ ಒಳಿತಾಗುತ್ತದೆ. ಜಾತಕದಲ್ಲಿ ಗುರು ದೋಷವಿದ್ದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಉತ್ತಮ. ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಠಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.