ಬೆಂಗಳೂರು: ಎಲ್ಲರೂ ಪ್ರತಿನಿತ್ಯ ದೇವರಲ್ಲಿ ಉತ್ತಮ ಆರೋಗ್ಯ, ಐಶ್ವರ್ಯ, ನೆಮ್ಮದಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಇದೆಲ್ಲವೂ ಸಾಧ್ಯವಾಗಬೇಕಾದರೆ ಸೂರ್ಯ ದೇವನ ಕುರಿತಾದ ಈ ಸ್ತೋತ್ರವನ್ನು ಓದುವುದು ಉತ್ತಮ.
ಇಂದು ಭಾನುವಾರವಾಗಿದ್ದು ಸೂರ್ಯನಿಗೆ ಸಂಬಂಧಿಸಿದ ದಿನವಾಗಿದೆ. ಸೂರ್ಯ ದೇವನನ್ನು ಕುರಿತಾ ಪ್ರಮುಖ ಮಂತ್ರಗಳಲ್ಲಿ ಆದಿತ್ಯ ಹೃದಯ ಸ್ತೋತ್ರ ಪ್ರಮುಖವಾಗಿದೆ. ಈ ಸ್ತೋತ್ರವನ್ನು ಓದುವುದರಿಂದ ಆರೋಗ್ಯ, ಆಯುಷ್ಯ ಜೊತೆಗೆ ಯಶಸ್ಸೂ ನಿಮ್ಮದಾಗುತ್ತದೆ ಎಂಬ ನಂಬಿಕೆಯಿದೆ.
ಇದಕ್ಕೆ ಕಾರಣವೂ ಇದೆ. ಈ ಮಂತ್ರವನ್ನು ಸ್ವತಃ ಪ್ರಭು ಶ್ರೀರಾಮ ಚಂದ್ರನಿಗೆ ಅಗಸ್ತ್ಯ ಮುನಿಗಳು ಮಂತ್ರೋಪದೇಶ ಮಾಡಿದ್ದರಂತೆ. ಲಂಕೆಗೆ ತೆರಳಿ ರಾವಣನ ಸಂಹಾರ ಮಾಡುವ ಮೊದಲು ಶ್ರೀರಾಮಚಂದ್ರ ಈ ಮಂತ್ರವನ್ನು ಪಠಿಸುವಂತೆ ಅಗಸ್ತ್ಯ ಮುನಿಗಳು ಸಲಹೆ ನೀಡಿದ್ದರಂತೆ. ಅದರಂತೆ ನಡೆದುಕೊಂಡ ರಾಮನಿಗೆ ಲಂಕೆಯ ರಾವಣನನ್ನು ಸಂಹರಿಸಲು ಸಹಾಯವಾಯಿತು ಎಂಬ ಐತಿಹ್ಯವಿದೆ.
ಕೇವಲ ಯಶಸ್ಸು ಮಾತ್ರವಲ್ಲ, ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸುಧಾರಿಸಲು, ಏಕಾಗ್ರತೆಗೆ ವೃದ್ಧಿಗೆ, ಸ್ಮರಣ ಶಕ್ತಿ ವೃದ್ಧಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಲು ಆದಿತ್ಯ ಹೃದಯ ಮಂತ್ರವನ್ನು ಓದಿದರೆ ಉತ್ತಮ. ಇದು ಸೂರ್ಯನ ಪವರ್ ಫುಲ್ ಮಂತ್ರಗಳಲ್ಲಿ ಒಂದಾಗಿದೆ.