ಮನೆಯಲ್ಲಿ ಸಂಜೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಲೇಬಾರದು

ಶುಕ್ರವಾರ, 29 ಡಿಸೆಂಬರ್ 2017 (06:07 IST)
Normal 0 false false false EN-US X-NONE X-NONE

ಬೆಂಗಳೂರು: ಸಂಜೆಯ ಹೊತ್ತಲಿ ದೇವರು ಮನೆಗೆ ಬರುತ್ತಾರೆ ಎಂಬ ನಂಬಿಕೆಯಿಂದ ಎಲ್ಲರೂ ಮನೆ ಬಾಗಿಲನ್ನು ತೆರೆದಿಟ್ಟು ದೀಪವನ್ನು ಹಚ್ಚುತ್ತಾರೆ. ಸಂಜೆಯ ಹೊತ್ತಲ್ಲಿ ದೀಪ ಹಚ್ಚಿದ ಮೇಲೆ ಈ ಕೆಲಸವನ್ನು ಮಾಡಲೇಬಾರದು. ಒಂದು ವೇಳೆ ಮಾಡಿದರೆ ನಿತ್ಯದಾರಿದ್ರ್ಯ, ನಿತ್ಯಅನಾರೋಗ್ಯ ಹೀಗೆ ಹಲವು ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ.

 

ಹಾಗೆ ಸಂಜೆಯ ಹೊತ್ತಿನಲ್ಲಿ ದಂಪತಿಗಳ ನಡುವೆ ಕಲಹ, ಕಿತ್ತಾಟ, ಬೇಸರ , ಹಬ್ಬಹರಿದಿನಗಳಲ್ಲಿ ಗಲಾಟೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಕಾರಣ ಮನೆಯವರು ಗೊತ್ತಿಲ್ಲದೆ ಸಂಜೆಯ ಹೊತ್ತಲಿ ಮಾಡುವ ಕೆಲವು ಕೆಲಸಗಳು.
 

ಸಂಧ್ಯಾ ಕಾಲದಲ್ಲಿ ದಿಪ ಹಚ್ಚಿದ ಮೇಲೆ ಮನೆಯಲ್ಲಿ ಕಸವನ್ನು ಗುಡಿಸಬಾರದು, ಗುಡಿಸಿ ಮನೆಯಿಂದ ಹೊರಗೆ ಹೋಗಿ ಹಾಕಬಾರದು. ಇದರಿಂದ ಮನೆ ಒಳಗೆ ರಾಹು ಪ್ರವೇಶ ಮಾಡುವುದರಿಂದ  ನತದೃಷ್ಟ ಜೀವನ ನಮ್ಮದಾಗುತ್ತದೆ. ಆದ್ದರಿಂದ ದೀಪ ಹಚ್ಚುವ  ಮೊದಲೆ ಅಂದರೆ ಸೂರ್ಯಾಸ್ತಕ್ಕೂ ಮುನ್ನ ಕಸವನ್ನು ಗುಡಿಸಬೇಕು. 

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ