ಮುಂಬೈ: ಇತ್ತೀಚೆಗಷ್ಟೇ ವಿವಾಹವಾಗಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈ ಮನೆಯಲ್ಲೇ ಇದೀಗ ನವ ಜೋಡಿ ಜೀವನ ಮಾಡುತ್ತಿದ್ದ ಇವರ ಜತೆಗೆ ಹೊಸ ಅತಿಥಿಗಳಿಗೂ ಬಂದಿದ್ದಾರೆ.
ಅವರು ಬೇರೆ ಯಾರೂ ಅಲ್ಲ. ವಿರಾಟ್ ಮತ್ತು ಅನುಷ್ಕಾರ ಮುದ್ದಿನ ನಾಯಿಗಳು. ಇಬ್ಬರೂ ಶ್ವಾನ ಪ್ರೇಮಿಗಳು. ಆಗಾಗ ತಮ್ಮ ಮುದ್ದಿನ ನಾಯಿಯ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುತ್ತಾರೆ.
ಇದೀಗ ಕೊಹ್ಲಿಯ ಬ್ರೂನೋ ಮತ್ತು ಅನುಷ್ಕಾರ ಡೂಡೆ ಜತೆಯಾಗಲಿದ್ದಾರೆ. ಮೂಲಗಳ ಪ್ರಕಾರ ಇನ್ನು ಮುಂದೆ ಈ ಎರಡೂ ನಾಯಿಗಳೂ ತಮ್ಮ ಮಾಲಿಕರ ಜತೆ 34 ಕೋಟಿ ರೂ ಮೌಲ್ಯದ ಫ್ಲ್ಯಾಟ್ ನಲ್ಲಿ ಒಂದೇ ಸೂರು ಹಂಚಿಕೊಳ್ಳಲಿವೆಯಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ