ಅವಳಿ ಬಾಳೆಹಣ್ಣು ದೇವರಿಗೆ ಇಡಬಾರದೇ? ಇದಕ್ಕೆ ಪಂಡಿತರು ಹೇಳುದೇನು ಗೊತ್ತಾ?

ಮಂಗಳವಾರ, 5 ಜೂನ್ 2018 (15:15 IST)
ಬೆಂಗಳೂರು : ಅವಳಿ ಬಾಳೆಹಣ್ಣನ್ನು ಮಕ್ಕಳು ತಿನ್ನಬಾರದು… ದೊಡ್ಡವರು ತಿಂದರೆ ಅವಳಿ ಮಕ್ಕಳು ಹುಟ್ಟುತ್ತಾರೆ…. ಈ ರೀತಿಯ ಬಾಳೆಹಣ್ಣನ್ನು ದೇವರಿಗೂ ಇಡಬಾರದು. ಈ ರೀತಿಯ ನಂಬಿಕೆಗಳು ನಮ್ಮಲ್ಲಿವೆ. ಹಾಗಾಗಿ ಅವಳಿ ಬಾಳೆಹಣ್ಣನ್ನು ತೆಗೆದುಕೊಳ್ಳಲು ಯಾರೂ ಇಷ್ಟಪಡಲ್ಲ.


ಈ ರೀತಿಯ ಅವಳಿ ಬಾಳೆಹಣ್ಣು ದೇವರಿಗೆ ಇಡಬಾರದೇ? ಈ ಪ್ರಶ್ನೆಗೆ ಪಂಡಿತರು ಈ ರೀತಿ ಉತ್ತರ ಕೊಡುತ್ತಾರೆ. ಬಾಳೆಗಿಡ ಎಂದರೆ ಬೇರೆ ಯಾರೋ ಅಲ್ಲ. ಸಾಕ್ಷಾತ್ ದೇವ ನರ್ತಕಿ ರಂಭೆಯ ಅವತಾರ. ಶ್ರೀಮಹಾವಿಷ್ಣುವಿನ ಬಳಿ ರಂಭೆ ತಾನೇ ಸೌಂದರ್ಯವತಿ ಎಂದು ಅಹಂಕಾರದಿಂದ ನಡೆದುಕೊಂಡ ಕಾರಣ ಆಕೆಗೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸೆಂದು ಮಹಾವಿಷ್ಣು ಶಪಿಸಿದ.


ಆದರೆ ಆಕೆ ತನ್ನ ತಪ್ಪು ತಿಳಿದುಕೊಂಡು ಬೇಡಿಕೊಂಡ ಕಾರಣ ದೇವರಿಗೆ ನೈವೇದ್ಯವಾಗಿ ಇಡುವ ಅರ್ಹತೆಯನ್ನು ವಿಷ್ಣು ಪ್ರಸಾದಿಸಿದ. ಅಷ್ಟು ಪವಿತ್ರವಾದ ಹಣ್ಣಿನಲ್ಲಿ ನಾವು ದೋಷಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ಅವಳಿ ಬಾಳೆಹಣ್ಣನ್ನು ಯಾವುದೇ ಅಭ್ಯಂತರವಿಲ್ಲದೆ ದೇವರಿಗೆ ಅರ್ಪಿಸಬಹುದು. ಆದರೆ ತಾಂಬೂಲದಲ್ಲಿ ಮಾತ್ರ ಜಂಟಿ ಬಾಳೆಹಣ್ಣು ಇಡಬಾರದು.


ಯಾಕೆಂದರೆ ಅವಳಿ ಬಾಳೆಹಣ್ಣಿನಲ್ಲಿ ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕದಲ್ಲೇ ಬರುತ್ತದೆ. ತಾಂಬೂಲದಲ್ಲಿ ಒಂದೇ ಒಂದು ಹಣ್ಣು ಇಡುವಂತಿಲ್ಲವಲ್ಲ. ಹಾಗಾಗಿ ತಾಂಬೂಲದಲ್ಲಿ ಈ ರೀತಿಯ ಜಂಟಿ ಬಾಳೆಹಣ್ಣು ಇಡಬಾರದು ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ