ಕೈಗೆ ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿರುವ ದಾರವನ್ನು ಯಾಕೆ ಕಟ್ಟುತ್ತಾರೆ ಎಂದು ತಿಳಿಬೇಕಾ?

ಭಾನುವಾರ, 3 ಜೂನ್ 2018 (16:03 IST)
ಬೆಂಗಳೂರು : ಪೂಜೆ, ವ್ರತಗಳನ್ನು ಮಾಡುವಾಗ, ಶುಭ ಕಾರ್ಯಗಳಲ್ಲಿ ಕೈಗೆ ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿರುವ ದಾರವನ್ನುಕಟ್ಟುತ್ತಾರೆ. ದೇವಾಲಯಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿಸಿದಾಗ ಸಹ ಪೂಜಾರಿಗಳು ಈ ದಾರವನ್ನು ಕೈಗೆ ಕಟ್ಟುತ್ತಾರೆ, ಇದನ್ನು ಮೌಳಿ ದಾರ ಎಂದು ಕರೆಯುತ್ತಾರೆ. ಈ ದಾರವನ್ನು ಕಟ್ಟುವುದರ ಹಿಂದಿನ ಉದ್ದೇಶ ಏನು ಗೊತ್ತಾ? ಯಾಕೆ ಕಟ್ಟುತ್ತಾರೆ ಅಂತ ತಿಳಿಬೇಕಾ

ಬಲಿಯ ದಾನಗುಣಗಳನ್ನು ಮೆಚ್ಚಿದ ವಾಮನ ಬಲಿಗೆ ಮೃತ್ಯುಂಜಯನಾಗಿ ಇರುವಂತೆ ವರ ಕೊಟ್ಟು ಈ ಮೌಳಿ ದಾರವನ್ನು ಕಟ್ಟುತ್ತಾನೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಅದನ್ನು ಕೈಗೆ ಕಟ್ಟುತ್ತಾ ಬಂದಿದ್ದಾರೆ. ಆ ರೀತಿಯಾಗಿ ಮೌಳಿ ದಾರ ಕಟ್ಟಿದರೆ ಯಾವುದೇ ಕೇಡು ಸಂಭವಿಸುವುದಿಲ್ಲವಂತೆ. ಮೃತ್ಯು ಅಷ್ಟು ಬೇಗ ಸಮೀಪಿಸುವುದಿಲ್ಲವಂತೆ. ಹೆಚ್ಚಿನ ಕಾಲ ಸುಖವಾಗಿ ಬದುಕುತ್ತಾರಂತೆ. ಸಾಕ್ಷಾತ್ ಬ್ರಹ್ಮ, ವಿಷ್ಣು, ಮಹೇಶ್ವರರು, ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ಕಾಪಾಡುತ್ತಾರಂತೆ.

 

ಮೌಳಿ ದಾರದಲ್ಲಿರುವ ಆ ಮೂರು ಬಣ್ಣಗಳು ನವಗ್ರಹಗಳಲ್ಲಿನ ಮೂರು ಬೃಹಸ್ಪತಿ, ಕುಜ, ಸೂರ್ಯ ಗ್ರಹಗಳು. ಇವರು ವ್ಯಕ್ತಿಗಳ ಐಶ್ವರ್ಯಕ್ಕೆ, ಸುಖಕ್ಕೆ, ಶಿಕ್ಷಣಕ್ಕೆ, ಆರೋಗ್ಯ ಪ್ರದಾತರಂತೆ. ಹಾಗಾಗಿ ಆ ಗ್ರಹ ಪೀಡೆ ಇರಬಾರದೆಂದ ಉದ್ದೇಶದಿಂದ ಆ ಬಣ್ಣಗಳಲ್ಲಿನ ಮೌಳಿ ದಾರವನ್ನು ಕಟ್ಟುತ್ತಾರೆ. ಇದನ್ನು ಪುರುಷರ ಬಲಗೈಗೆ, ಸ್ತ್ರೀಯರಿಗೆ ಎಡಗೈಗೆ ಕಟ್ಟುತ್ತಾರೆ. ಮದುವೆಯಾಗದ ಸ್ತ್ರೀಯರಿಗೆ ಬಲಗೈಗೆ ಕಟ್ಟುತ್ತಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

 

 

           

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ