ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಇಂತವರು ಹಚ್ಚಬಾರದು

ಗುರುವಾರ, 16 ಆಗಸ್ಟ್ 2018 (06:52 IST)
ಬೆಂಗಳೂರು : ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಲ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲೆಂದು ಹಚ್ಚುತ್ತೇವೆ. ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಯಾವುದಾದರೂ ಸಮಸ್ಯೆ ಅನುಭವಿಸುತಿದ್ದರೆ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತದೆ.


ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು. ದೇವಿಯ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗೆ 11.00ರಿಂದ 12.30 ವರೆಗೆ ಹಚ್ಚಬಹುದು. ನಿಂಬೆದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ. ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗಿರುತ್ತದೆ.


ಯಾರಿಗೆ ಸಮಸ್ಯೆ ಬಂದಿದೆ ಅವರಿಗೆ ಹಚ್ಚುವ ಸಮಯವಿಲ್ಲದಿದ್ದರೂ ಅವರ ಮನೆಯವರು ಯಾರು ಬೇಕಾದರು ದೀಪವನ್ನು ಹಚ್ಚಬಹುದು. ಆದರೆ ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು. ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಆರೋಗ್ಯ ಸರಿ ಇಲ್ಲದಿದ್ದಾಗ, ಮೈಲಿಗೆ, ಸೂತಕ ಇರುವಾಗ ಹಚ್ಚಬಾರದು. ಮಕ್ಕಳ ಹುಟ್ಟುಹಬ್ಬ, ಮದುವೆಯಾದದಿನಗಳಂದು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ