ಅಪ್ಪಿ ತಪ್ಪಿಯೂ ತುಳಸಿ ಇದ್ದಲ್ಲಿ ಈ ತಪ್ಪನ್ನು ಮಾಡಬೇಡಿ

ಶುಕ್ರವಾರ, 24 ಮೇ 2019 (09:17 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ತುಳಸಿಗಿಡಕ್ಕೆ ಮಹತ್ವದ ಅಪ್ಪಿ ತಪ್ಪಿಯೂ ಸ್ಥಾನ ನೀಡಲಾಗಿದೆ. ತುಳಸಿ ಗಿಡವನ್ನು ಲಕ್ಷ್ಮೀದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ.ಇಂತಹ ತುಳಸಿ ಗಿಡದ ಹತ್ತಿರ ಈ ತಪ್ಪುಗಳನ್ನ ಮಾಡಬಾರದು.




ಪೂಜೆ ಮಾಡುವುದು ತುಂಬಾ ತಪ್ಪು, ಹೀಗೆ ಪೂಜೆ ಮಾಡುವ ತುಳಸಿ ದಳಗಳನ್ನ ಕೀಳುವುದರಿಂದ ತುಳಸಿ ದೇವಿಯ ಕೋಪಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ತುಳಸಿ ಗಿಡದ ದಳವನ್ನ ಕೀಳದೆ ಮತ್ತೊಂದು ತುಳಸಿ ಗಿಡವನ್ನ ನೆಟ್ಟು ಆ ಗಿಡದ ದಳಗಳನ್ನ ದೇವರಿಗೆ ಸಮರ್ಪಿಸಿದರೆ ಒಳ್ಳೆಯದು. ಒಣಗಿದ ತುಳಸಿ ಗಿಡವನ್ನ ಹಾಗೇ ಬಿಡಬಾರದು. ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು.


ಇನ್ನು ಒಗೆದ ಬಟ್ಟೆಗಳಿಂದ ಬರುವ ನೀರನ್ನ ತುಳಸಿ ಗಿಡದ ಮೇಲೆ ಬೀಳದಂತೆ ನೋಡಿಕೊಳ್ಳಬೇಕು, ಅಪ್ಪಿ ತಪ್ಪಿ ಬಟ್ಟೆಯ ನೀರಿನ ಹನಿಗಳು ತುಳಸಿ ಗಿಡದ ಮೇಲೆ ಬಿದ್ದರೆ ತುಳಸಿ ಅಗೌರವ ಮಾಡಿದಂತೆ ಆಗುತ್ತದೆ. ಅರಸಿನದಿಂದ ಮಾಡಿದ ಗಣಪತಿಯನ್ನ ಪೂಜೆ ಮಾಡಿದ ನಂತರ ಅರಿಸಿನ ಗಣಪತಿಯನ್ನ ತೆಗೆದುಕೊಂಡು ಹೋಗಿ ತುಳಸಿ ಗಿಡದ ಹತ್ತಿರ ಇಡುತ್ತಾರೆ, ಆದರೆ ಇದು ತಪ್ಪು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ