ವರಮಹಾಲಕ್ಷ್ಮೀ ವ್ರತದ ದಿನ ತಾಂಬೂಲ ಕೊಡುವಾಗ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ
ಮಂಗಳವಾರ, 28 ಜುಲೈ 2020 (07:41 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮೀ ವ್ರತದ ದಿನ ಮಹಿಳೆಯರು ಪೂಜೆ ಮಾಡುತ್ತಾರೆ. ಆ ವೇಳೆ ಮನೆಗೆ ಬಂದ ಮುತ್ತೈದೆಯರಿಗೆ ತಾಂಬೂಲವನ್ನು ನೀಡುತ್ತಾರೆ. ಆದರೆ ಆ ವೇಳೆ ಈ ತಪ್ಪನ್ನು ಮಾಡಬಾರದು.
ಮುತ್ತೈದೆಯರಿಗೆ ತಾಂಬೂಲ ಕೊಡುವಾಗ ವೀಳ್ಯದೆಲೆಯ ಮೇಲೆ ತಾಂಬೂಲ ಕೊಡುತ್ತೀರಿ. ಆ ವೇಳೆ ವೀಳ್ಯದೆಲೆಯ ತೊಟ್ಟು ನಿಮ್ಮ ಕಡೆಗೆ ಇರಬೇಕು. ತುದಿ ಅವರ ಕಡೆಗೆ ಮುಖ ಮಾಡಿರಬೇಕು. ಯಾಕೆಂದರೆ ವೀಳ್ಯದೆಲೆಯ ತೊಟ್ಟಿನಲ್ಲಿ ಮೃತ್ಯುದೇವರು ನೆಲೆಸಿರುತ್ತಾರೆ. ಇದರಿಂದ ನಿಮಗೆ ದೋಷಗಳು ಬರುತ್ತದೆ. ಹಾಗೇ ತಾಂಬೂಲದಲ್ಲಿ ನಾಣ್ಯವನ್ನು ತಪ್ಪದೇ ಇಟ್ಟು ಕೊಡಬೇಕು.