ಬೆಂಗಳೂರು : ಎಲ್ಲರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ನೀವು ಜೀವನದಲ್ಲಿ ಉದ್ಧಾರವಾಗಬೇಕು ಎನ್ನುವವರು ಈ ಹೊತ್ತಿನಲ್ಲಿ ಸ್ನಾನ ಮಾಡಿ.
ಹಿಂದೂ ಧರ್ಮದಲ್ಲಿ 4 ಹೊತ್ತಿನಲ್ಲಿ ಸ್ನಾನದ ಸಮಯವನ್ನು ನಿಗದಿಪಡಿಸಲಾಗುವುದು. ಅದರಲ್ಲಿ ಮೊದಲನೇಯದು ದೇವತಾ ಸ್ನಾನ, ಋಷಿ ಸ್ನಾನ, ಮಾನವ ಸ್ನಾನ, ಮತ್ತು ರಾಕ್ಷಸ ಸ್ನಾನ ಎಂದು ವಿಂಗಡಿಸಿದ್ದಾರೆ. ಬೆಳಗ್ಗೆ ಎದ್ದು 6 ಗಂಟೆ, 7ಗಂಟೆ, 8ಗಂಟೆಗೆ ಸ್ನಾನ ಮಾಡಿದರೆ ನಿಮ್ಮಲ್ಲಿ ರಾಕ್ಷಸ ತತ್ವ ಹೆಚ್ಚಾಗುತ್ತದೆ. ಇದರಿಂದ ಜೀವನದಲ್ಲಿ ಏಳಿಗೆಯಾಗುವುದಿಲ್ಲ.
ಆದಕಾರಣ ಬೆಳಿಗ್ಗೆ 3-4 ಗಂಟೆಯೊಳಗೆ ಸ್ನಾನ ಮಾಡಿ. ಇದನ್ನು ಋಷಿ ಸ್ನಾನ ಎನ್ನುತ್ತಾರೆ. ಇದರಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಹಾಗೇ 4-5ಗಂಟೆಯೊಳಗೆ ಸ್ನಾನ ಮಾಡದರೆ ಅದನ್ನು ದೇವತಾ ಸ್ನಾನ ಎನ್ನುತ್ತಾರೆ. ಇದರಿಂದ ಜೀವನದಲ್ಲಿ ಏಳಿಗೆಯಾಗುತ್ತದೆ.