ಅಪ್ಪಿತಪ್ಪಿಯೂ ದೇವರ ಪೂಜೆಗೆ ಈ ಹೂವನ್ನು ಬಳಸಬೇಡಿ

ಸೋಮವಾರ, 8 ಜುಲೈ 2019 (09:02 IST)
ಬೆಂಗಳೂರು : ಹೂವನ್ನು ಹೆಚ್ಚಾಗಿ ದೇವರ ಪೂಜೆಗೆ ಬಳಸುತ್ತಾರೆ. ಆದರೆ ಎಲ್ಲಾ ಹೂಗಳು ದೇವರ ಪೂಜೆಗೆ ಬಳಸುವುದಿಲ್ಲ. ಕೆಲವು ಹೂಗಳು ಪೂಜೆಗೆ ಯೋಗ್ಯವಾಗಿಲ್ಲ. ಅವುಗಳನ್ನು  ದೇವರಿಗೆ ಅರ್ಪಿಸಿದರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ. ಅಂತಹ ಹೂಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.




ಗಣೇಶನಿಗೆ ತುಳಸಿ ಹೂವನ್ನು ಸಮರ್ಪಣೆ ಮಾಡಬಾರದು. ವಿಷ್ಣುವನ್ನು ಕಣಗಲು ಹೂವಿನಿಂದ ಪೂಜಿಸಬಾರದು. ಸಂಪಿಗೆ ಹೂ ಮತ್ತು ಹೆಚ್ಚು ಸುವಾಸನೆ ಹೊಂದಿರುವ ಕೇದಿಗೆ ಹೂಗಳನ್ನು ಶಿವನಾರಾಧನೆಗೆ ಬಳಸಬಾರದು.


ಜಗನ್ಮಾತೆಯರಾದ ಲಕ್ಷ್ಮಿ , ಸರಸ್ವತಿ , ಪಾರ್ವತಿ ಮಾತೆಯರ ಪೂಜೆಗೆ ಗರಿಕೆಯನ್ನು ಬಳಸಬಾರದು . ಅದರಲ್ಲೂ ದುರ್ಗಾ ಮಾತೆಗೆ ಗರಿಕೆ ಹೂವಿನಿಂದ ಪೂಜಿಸಬಾರದು. ಸೂರ್ಯನಾರಾಯಣನ ಪೂಜೆಗೆ ಬಿಲ್ವವನ್ನು ಬಳಸಬಾರದು . ಮಲ್ಲಿಗೆ ಹೂವನ್ನು ಕಾಲಭೈರವನ ಪೂಜೆಗೆ ಉಪಯೋಗಿಸಬಾರದು.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ