ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸುತ್ತೇವೆ. ಆದರೆ ಯಾವ ರಾಶಿಯವರಿಗೆ ಯಾವ ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ ಎಂದು ಇಲ್ಲಿದೆ ನೋಡಿ ವಿವರ.
ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯನ್ನು ಒಪ್ಪವಾಗಿಟ್ಟುಕೊಂಡು ದೀಪ ಹಚ್ಚುವುದು ಮಾತ್ರವಲ್ಲ, ನಾವೂ ಹೊಸ ಬಟ್ಟೆಯನ್ನು ಧರಿಸಿರಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ರಂಗು ರಂಗಿನ ಬಟ್ಟೆ ಧರಿಸಿರುತ್ತಾರೆ. ಯಾವ ರಾಶಿಯವರಿಗೆ ಯಾವ ಬಣ್ಣದ ಬಟ್ಟೆ ಸೂಕ್ತ ಎಂದು ಇಲ್ಲಿ ನೋಡಿ.
ಮೇಷ: ಕೆಂಪು ಅಥವಾ ಕೆಂಬಣ್ಣದ ಶೇಡ್ ಇರುವ ಇಲ್ಲವೇ ಮರೂನ್ ಬಟ್ಟೆ ಧರಿಸಿದರೆ ಶುಭ.
ವೃಷಭ: ನೀಲಿ ಬಣ್ಣದ ಅಥವಾ ಪಿಂಕ್ ಬಣ್ಣದ ಬಟ್ಟೆ ಧರಿಸಿರಬೇಕು.
ಮಿಥುನ: ಕಿತ್ತಳೆ ಅಥವಾ ಹಸಿರುವ ಬಣ್ಣದ ವಸ್ತ್ರ ಧರಿಸಿ.
ಕರ್ಕಟಕ: ಹಸಿರು ಅಥವಾ ಬಿಳಿ ಇಲ್ಲವೇ ಬೆಳ್ಳಿ ಬಣ್ಣದ ವಸ್ತ್ರ ಧರಿಸಿ.
ಸಿಂಹ: ಹೊಂಬಣ್ಣದ ಅಥವಾ ಕಂದು ಬಣ್ಣದ ಬಟ್ಟೆ ಧರಿಸಿ.
ಕನ್ಯಾ: ಬಿಳಿ, ಹಸಿರು ಇಲ್ಲವೇ ನೀಲಿ ಬಣ್ಣದ ಬಟ್ಟೆ ಧರಿಸಿ.
ತುಲಾ: ಹಳದಿ, ಪಿಂಕ್ ಇಲ್ಲವೇ ರಜತ ವರ್ಣದ ಬಟ್ಟೆ ಧರಿಸಿ.
ವೃಶ್ಚಿಕ: ಮರೂನ್ ಇಲ್ಲವೇ ಕಡು ಕೆಂಪು ಬಣ್ಣದ ಬಟ್ಟೆ ಧರಿಸಿ.
ಧನು: ನೇರಳೆ, ಹಳದಿ ಇಲ್ಲವೇ ಸಾಸಿವೆ ಕಲರ್ ಬಟ್ಟೆ ಧರಿಸಿ.
ಮಕರ: ನೀಲಿ, ಕಪ್ಪು ಅಥವಾ ಕಡು ಬೂದು ಬಣ್ಣದ ಬಟ್ಟೆ ಧರಿಸಿ.
ಕುಂಭ: ಬೂದು ಬಣ್ಣದ ಅಥವಾ ನೀಲಿ ಬಣ್ಣದ ಬಟ್ಟೆ ಧರಿಸಿ.
ಮೀನ: ಪಿಂಕ್ ಅಥವಾ ಹಳದಿ ಬಣ್ಣದ ಬಟ್ಟೆ ಧರಿಸಬಹುದು.