ಗುರುವಾರ ರಾಘವೇಂದ್ರ ಸ್ವಾಮಿಯ ಆರಾಧನೆ ಹೀಗೆ ಮಾಡಿದರೆ ಈ ಯೋಗ ನಿಮ್ಮದಾಗುತ್ತದೆ

Krishnaveni K

ಗುರುವಾರ, 8 ಆಗಸ್ಟ್ 2024 (08:44 IST)
Photo Credit: Facebook
ಬೆಂಗಳೂರು: ಗುರುವಾರ ಬಂತೆಂದರೆ ಗುರು ರಾಘವೇಂದ್ರ ಸ್ವಾಮಿಯ ದಿನ ಎಂದು ನಮಗೆಲ್ಲಾ ಗೊತ್ತು. ಮಹಾವಿಷ್ಣುವಿನಂತೆ ಗುರುವಾರ ರಾಘವೇಂದ್ರ ಸ್ವಾಮಿಗಳ ಆರಾಧನೆಗೂ ಪ್ರಶಸ್ತವಾದ ದಿನವಾಗಿದೆ.

ಗುರುವಾರ ರಾಯರ ಆರಾಧನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಸುಖ ಸಮೃದ್ಧಿ ನಮ್ಮದಾಗುತ್ತದೆ. ರಾಘವೇಂದ್ರ ಸ್ವಾಮಿಯ ಭಕ್ತರು ಇಂದು ರಾಯರ ಮಠಕ್ಕೆ ತೆರಳಿ ಪೂಜೆ ಸಲ್ಲಿಸುವುದು ಸಾಮಾನ್ಯ. ಅದರ ಹೊರತಾಗಿ ಮನೆಯಲ್ಲಿಯೂ ರಾಘವೇಂದ್ರ ಸ್ವಾಮಿಗಳ ಪೂಜೆ ಮಾಡಿಕೊಳ್ಳಬಹುದು.

ಸತತವಾಗಿ ಏಳು ಗುರುವಾರಗಳಂದು ವ್ರತವಿದ್ದು ರಾಯರ ಪೂಜೆ ಮಾಡುವುದರಿಂದ ಮನೆಯಲ್ಲಿ ಅಶಾಂತಿ, ಕಲಹ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿ ಮೂಡುವುದು. ಮನೆಯಲ್ಲಿ ರಾಘವೇಂದ್ರ ಸ್ವಾಮಿಯ ವಿಗ್ರಹವಿದ್ದರೆ ಅದನ್ನು ಸ್ವಚ್ಛಗೊಳಿಸಿ ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಿ.

ನೆನಪಿರಲಿ, ರಾಘವೇಂದ್ರ ಸ್ವಾಮಿಗೆ ತುಳಸಿಯ ಹಾರ ಅತ್ಯಂತ ಪ್ರಿಯವಾಗಿದ್ದು, ಇದನ್ನು ಪೂಜೆಯಲ್ಲಿ ಬಳಸಲೇಬೇಕು. ತಾಜಾ ಹಣ್ಣು, ತೆಂಗಿನ ಕಾಯಿ, ವೀಳ್ಯದೆಲೆಯಿಂದ ನೈವೇದ್ಯ ಮಾಡಬೇಕು. ದೀಪ ಬೆಳಗಿ ರಾಘವೇಂದ್ರ ಸ್ವಾಮಿಗಳ ಕುರಿತಾಗಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯ ಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನುವೇ’ ಎಂದು ಮಂತ್ರ ಹೇಳುತ್ತಾ ಪೂಜೆ ಮಾಡಿ. ಈ ರೀತಿ ಪ್ರತೀ ಗುರುವಾರ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ, ಸಮೃದ್ಧಿ ಉಂಟಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ