ರೋಗ ನಿವಾರಣೆಗಾಗಿ ಶ್ರೀಮನ್ನಾರಾಯಣನ ಈ ಮಂತ್ರ ಪಠಿಸಿ

Krishnaveni K

ಶುಕ್ರವಾರ, 2 ಆಗಸ್ಟ್ 2024 (08:52 IST)
Photo Credit: Facebook
ಬೆಂಗಳೂರು: ಮನುಷ್ಯನೆಂದ ಮೇಲೆ ರೋಗ-ರುಜಿನಗಳು ಸಾಮಾನ್ಯ. ಆದರೆ ರೋಗ ಭಯದಿಂದಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಶಕ್ತರಾಗಿದ್ದರೆ ಶ್ರೀಮನ್ನಾರಾಯಣನ ಕುರಿತು ಈ ಶ್ಲೋಕಗಳನ್ನು ಪಠಿಸುವುದು ಉತ್ತಮ.

ತ್ರಿಮೂರ್ತಿಗಳಲ್ಲಿ ಒಬ್ಬರಾಗಿರುವ ನಾರಾಯಣನ ನಾಮ ಸ್ಮರಣೆಯಿಂದ ನಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿ ಸಿಗುತ್ತದೆ. ನಾರಾಯಣನ ನಾಮಸ್ಮರಣೆ ಎಂದರೆ ಅಷ್ಟೊಂದು ಅದ್ಭುತ ಶಕ್ತಿಯುಳ್ಳದ್ದಾಗಿದೆ. ಶ್ರೀಮನ್ನಾರಾಯಣನ ಸ್ತೋತ್ರಗಳಲ್ಲಿ ಪ್ರಮುಖವಾದುದು ನಾರಾಯಣೀಯಂ.

ನಾರಾಯಣನ ಶ್ರೇಷ್ಠ ಭಕ್ತ, ವಿಧ್ವಾಂಸ ಮೇಲ್ಪತ್ತೂರ್ ನಾರಾಯಣ ಭಟ್ಟತಿರಿ ಬರೆದ ಶ್ರೀ ನಾರಾಯಣೀಯಂ ಭಗವಾನ್ ನಾರಾಯಣ ಕತೆಯನ್ನು ವಿವರಿಸುತ್ತದೆ. ಇದರಲ್ಲಿ ಒಟ್ಟು 1034 ಶ್ಲೋಕಗಳಿವೆ. ಇದನ್ನು ಒಟ್ಟಿಗೇ ಓದಲು ಸಾಧ್ಯವಿಲ್ಲವೆಂದರೂ ಪ್ರತಿನಿತ್ಯ ಒಂದಷ್ಟು ಶ್ಲೋಕಗಳನ್ನು ಪಠಿಸುತ್ತಾ ಬರಬಹುದು.

ನಾರಾಯಣೀಯಂ ಓದುವುದರಿಂದ ನಮಗೆ ಮಾನಸಿಕ ಮತ್ತು ದೈಹಿಕ ಶಕ್ತಿ ಎರಡೂ ವೃದ್ಧಿಸುತ್ತದೆ. ನಮ್ಮ ಆರೋಗ್ಯ ವೃದ್ಧಿಯಾಗಿ ಚೈತನ್ಯ ಬರುತ್ತದೆ. ಜೊತೆಗೆ ನಾರಾಯಣ ಪುಣ್ಯ ನಾಮ ಸ್ಮರಣೆ ಮಾಡುವುದರಿಂದ ನಾವು ಮಾಡಿದಂತಹ ಪಾಪ ಕಾರ್ಯಗಳು ತೊಡೆದು ಹೋಗುತ್ತದೆ ಎನ್ನುವ ನಂಬಿಕೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ