ಶ್ರಾವಣ ಮಾಸದಲ್ಲಿ ನಾನ್ ವೆಜ್ ತಿನ್ನಬಾರದೇ

Krishnaveni K

ಮಂಗಳವಾರ, 6 ಆಗಸ್ಟ್ 2024 (08:39 IST)
ಬೆಂಗಳೂರು: ಆಷಾಢ ಮಾಸ ಕಳೆದು ಶ್ರಾವಣ ಮಾಸ ಬಂದೇ ಬಿಟ್ಟಿದೆ. ಇನ್ನೇನು ಸಾಲು ಸಾಲು ಹಬ್ಬಗಳು ಬರಲಿವೆ. ಈ ಮಾಸದಲ್ಲಿ ನಾನ್ ವೆಜ್ ತಿನ್ನಬಾರದು ಎನ್ನುತ್ತಾರೆ. ಇದು ಯಾಕೆ, ನಿಜವೇ ಎಂದು ಇಲ್ಲಿ ನೋಡಿ.

ಶ್ರಾವಣ ಮಾಸದಲ್ಲಿ ಅನೇಕರು ಮಾಂಸಾಹಾರವನ್ನು ತ್ಯಜಿಸುತ್ತಾರೆ. ದೇವರ ಹೆಸರಿನಲ್ಲಿ ಈ ಒಂದು ಮಾಸ ಮಾಂಸಾಹಾರ ತ್ಯಜಿಸಿ ದೇವರ ಉಪಾಸನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದನ್ನು ಕೆಲವರು ಧಾರ್ಮಿಕ ಶ್ರದ್ಧೆಯಿಂದ ಮಾಡಿದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಎನ್ನುವವರಿದ್ದಾರೆ.

ಮಳೆಗಾಲದಲ್ಲಿ ನೀರು ಕಲುಷಿತವಾಗಿದ್ದು, ಈ ಸಮಯದಲ್ಲಿ ಮೀನು ಇತ್ಯಾದಿ ಮಾಂಸಾಹಾರ ಯೋಗ್ಯ ಜೀವಿಗಳು ರೋಗ ಹರಡುವ ಭಯವಿದೆ. ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರ ಸೇವನೆ ಅಷ್ಟು ಒಳ್ಳೆಯದಲ್ಲ ಎನ್ನುವುದು ವೈಜ್ಞಾನಿಕವಾಗಿ ನೀಡಲಾಗುವ ಕಾರಣವಾಗಿದೆ.

ಇದರ ಜೊತೆಗೆ ಧಾರ್ಮಿಕವಾಗಿಯೂ ಈ ಮಾಸದಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ. ಯಾಕೆಂದರೆ ಶ್ರಾವಣ ಮಾಸ ಹಲವು ದೇವರುಗಳ ಹಬ್ಬಗಳ ಮಾಸ. ದೇವರ ಆರಾಧನೆಯ ನಡುವೆ ಮಾಂಸಾಹಾರ ಮಾಡದೇ ಸಾತ್ವಿಕ ಆಹಾರ ಮಾಡುವುದು ಒಳ್ಳೆಯದು ಎಂಬ ಕಾರಣಕ್ಕೆ ಶ್ರಾವಣ ಮಾಸದಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ