ಮಂಗಳವಾರ ಹನುಮಾನ್ ಚಾಲೀಸಾ ಪಠಣೆ ಮಾಡಿದರೆ ಏನು ಲಾಭ

Krishnaveni K

ಮಂಗಳವಾರ, 21 ಮೇ 2024 (08:25 IST)
ಬೆಂಗಳೂರು: ಮಂಗಳವಾರ ಸಾಮಾನ್ಯವಾಗಿ ಶುಭ ಕೆಲಸಗಳಿಗೆ ಪ್ರಶಸ್ತವಾದ ದಿನವಲ್ಲ. ಆದರೆ ಈ ದಿನ ಹನುಮಾನ್ ಚಾಲೀಸಾ ಪಠಣೆ ಮಾಡಿ ಆಂಜನೇಯನನ್ನು ಪೂಜಿಸಿದರೆ ಎಷ್ಟು ಲಾಭವಿದೆ ಗೊತ್ತಾ?

ಮಂಗಳವಾರ ಮತ್ತು ಶನಿವಾರದಂದು ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಂಗಳವಾರ ಆಂಜನೇಯ ಸ್ವಾಮಿಗೆಂದೇ ಮೀಸಲಾದ ದಿನ. ಈ ದಿನ ಹನುಮಾನ್ ಚಾಲೀಸಾ ಪಠಣ ಮಾಡುವುದರಿಂದ ನಮ್ಮ ಸಕಲ ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ.

ಕಲಿಯುಗದಲ್ಲಿ ಮನುಷ್ಯರ ಕಷ್ಟಗಳನ್ನು ಪರಿಹರಿಸುವುದಕ್ಕೆಂದೇ ಆಂಜನೇಯ ಸ್ವಾಮಿ ಇದ್ದಾನೆ ಎಂಬ ನಂಬಿಕೆಯಿದೆ. ರಾಮನ ಅಣತಿಯಂತೆ ಆಂಜನೇಯ ಸ್ವಾಮಿ ಈ ಕಲಿಯುಗದ ಅಂತ್ಯದವರೆಗೂ ಬದುಕಿರುತ್ತಾನೆ. ಮಂಗಳವಾರದಂದು ನಮ್ಮ ಎಲ್ಲಾ ದೋಷ ಪರಿಹಾರಕ್ಕೆ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಬೇಕು.

ಅದರಲ್ಲೂ ಹನುಮಾನ್ ಚಾಲೀಸಾ ಅತ್ಯಂತ ಪವರ್ ಫುಲ್ ಮಂತ್ರವಾಗಿದೆ. ಇದನ್ನು ಪ್ರತಿನಿತ್ಯ ಪಠಣೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಅದರಲ್ಲೂ ಮಂಗಳವಾರ ಪಠಣೆ ಮಾಡಿದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ. ಜೊತೆಗೆ ದೋಷ ನಿವಾರಣೆ ಮಾಡಿದಂತಾಗುತ್ತದೆ. ಹೀಗಾಗಿ ತಪ್ಪದೇ ಮಂಗಳವಾರ ಹನುಮಾನ್ ಚಾಲೀಸಾ ಓದಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ