ಯಶಸ್ಸು ಸಿಗಬೇಕಾದರೆ ವೈಶಾಖ ಮಾಸದಲ್ಲಿ ಈ ಕೆಲಸ ಮಾಡಬೇಕು

Krishnaveni K

ಶನಿವಾರ, 11 ಮೇ 2024 (11:02 IST)
ಬೆಂಗಳೂರು: ಚೈತ್ರ ಮಾಸ ಮುಗಿದು ಇದೀಗ ವೈಶಾಖ ಮಾಸ ಆರಂಭವಾಗಿದೆ. ಜೂನ್ 6 ರವರೆಗೆ ವೈಶಾಖ ಮಾಸ ಇರಲಿದೆ. ಈ ಮಾಸದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ನಾವು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರುತ್ತದೆ.

ಪುರಾಣದ ಪ್ರಕಾರ ವೈಶಾಖ ಮಾಸ ಅತ್ಯಂತ ಶ್ರೇಷ್ಠ ಮಾಸವಾಗಿದೆ. ಈ ಮಾಸದಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಮಡಿಯಲ್ಲಿ ಮಹಾವಿಷ್ಣುವಿನ ಪೂಜೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೆ ಅಂದುಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆಯಿದೆ.

ವೈಶಾಖ ಮಾಸ ಎಂದರೆ ಬೇಸಿಗೆಯ ಝಳ ಹೆಚ್ಚಿರುವ ಸಮಯ. ಈ ಸಮಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ನೀಡುವುದರಿಂದ ನಿಮ್ಮ ಪಾಪ ಫಲಗಳು ತಕ್ಕಮಟ್ಟಿಗೆ ದೂರವಾಗುತ್ತದೆ. ಅಲ್ಲದೆ, ಇತರರಿಗೆ ಈ ಮಾಸದಲ್ಲಿ ದಾನ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತೀರಿ.

ವೈಶಾಖ ಮಾಸದಲ್ಲಿ ಮಹಾವಿಷ್ಣುವಿನ ಆರಾಧನೆ ಮಾಡುವುದು ಪ್ರಮುಖವಾಗಿದೆ. ಈ ಮಾಸದಲ್ಲಿ ಬಡವರಿಗೆ ದಾನ ಮಾಡುವುದು, ವಿಷ್ಣುವಿಗೆ ಪೂಜೆ ಮಾಡುವುದು ಮಾಡುವುದರಿಂದ ನಿಮ್ಮ ಕೆಲಸಗಳು ಯಶಸ್ವಿಯಾಗುತ್ತವೆ. ತಪ್ಪದೇ ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ