ಹಣದ ಸಮಸ್ಯೆ ಕಳೆಯಲು ತೆಂಗಿನ ಕಾಯಿಯಿಂದ ಹೀಗೆ ಮಾಡಿ

ಮಂಗಳವಾರ, 20 ಆಗಸ್ಟ್ 2019 (08:57 IST)
ಬೆಂಗಳೂರು : ಮನುಷ್ಯನ ಜೀವನದಲ್ಲಿ ಹಣಕಾಸಿನ ಸಮಸ್ಯೆ ಸರ್ವೇಸಾಮಾನ್ಯ. ಎಷ್ಟೇ ದುಡಿದರೂ ಹಣ ಉಳಿತಾಯ ಮಾಡೋಕಾಗಲ್ಲ, ಸಾಲವನ್ನು ತೀರಿಸೋಕೆ ಆಗುವುದಿಲ್ಲ ಎನ್ನುವವರು ಶಿವನ ತಲೆಯ ಸ್ವರೂಪವಾದ ತೆಂಗಿನಕಾಯಿಯಿಂದ ಹೀಗೆ ಮಾಡಿ.
ಶನಿವಾರದಂದು ಬೆಳಿಗ್ಗೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಚವಾಗಿ ತೊಳೆದುಕೊಂಡು ಸಂಕಷ್ಟಗಳು ಕಳೆಯಲಿ ಎಂದು  ಶಿವನ ಸಂಕಲ್ಪ ಮಾಡಿ. ಬಳಿಕ ಕುಂಕುಮ ತೆಗೆದುಕೊಂಡು ಅದನ್ನು ನೀರಿನಿಂದ ಮಿಶ್ರಣ ಮಾಡಿ ಅದರಿಂದ ತೆಂಗಿನಕಾಯಿಯ ಮೇಲೆ ಬಲಗೈಯ ಮಧ್ಯದ ಬೆರಳಿನಿಂದ ಸ್ವಸ್ತಿಕ್ ಸಂಕೇತವನ್ನು ಬರೆಯಬೇಕು. ನಂತರ ಕೆಂಪು ವಸ್ತ್ರದಿಂದ ತೆಂಗಿನಕಾಯಿಯನ್ನು ಸುತ್ತಿ ಅದನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ.


ನಂತರ ಶನಿವಾರ ಸಂಜೆಯ ವೇಳೆ ಅದನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಟ್ಟು ಬನ್ನಿ ಅಥವಾ ನೀರ್ಜನ ಪ್ರದೇಶದಲ್ಲಿರುವ ಆಲದ ಮರ ಅಥವಾ ಅರಳೀಮರದ ಬುಡದಲ್ಲಿ ಇಡಿ. ಇದರಿಂದ ಹಣಕಾಸಿನ ಸಮಸ್ಯೆ ನಿಮಗೆ ಕಾಡುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ