ಇಂದು ಸಿಎಂ ಯಡಿಯೂರಪ್ಪನವರ ನಿವಾಸಕ್ಕೆ ಶಾಸಕರ ದಂಡು ಆಗಮಿಸಿದ್ದೇಕೆ?

ಸೋಮವಾರ, 19 ಆಗಸ್ಟ್ 2019 (10:47 IST)
ಬೆಂಗಳೂರು : ಇಂದು ಸಂಜೆ ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆಯಲ್ಲಿ  ಇಂದು ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಶಾಸಕರಾದ ಬಸವರಾಜ ಬೊಮ್ಮಾಯಿ, ಸುನೀಲ್ ಕುಮಾರ್, ಉಮೇಶ್ ಕತ್ತಿ ಸೇರಿದಂತೆ ಹಲವು ಶಾಸಕರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.


ಸಂಪುಟಕ್ಕೆ ಸೇರಲಿರುವವರ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಳಿಸಿಕೊಡಲಿದ್ದು, 13 -15 ಮಂದಿಗಷ್ಟೇ ಅವಕಾಶ ಸಿಗಲಿದೆ. ಇದರಿಂದ ಅನೇಕರಿಗೆ ಅವಕಾಶ ತಪ್ಪಲಿರುವ ಹಿನ್ನಲೆಯಲ್ಲಿ ಇದರಿಂದ ಆತಂಕಕ್ಕೆ ಒಳಗಾದ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಸಭೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ