ಈ ವ್ರತವನ್ನು ಶುಕ್ಲ ಪಕ್ಷದಲ್ಲಿ ಬರುವ ಮಂಗಳವಾರದಿಂದ ಪ್ರಾರಂಭಿಸಿ , 21 ದಿನಗಳು ಅಥವಾ 21 ಮಂಗಳವಾರಗಳು ಗಣೇಶನನ್ನು ಪೂಜಿಸಿದರೆ ಅತ್ಯಂತ ಪವಿತ್ರ ಎಂದು ಪಂಡಿತರು ಹೇಳುತ್ತಾರೆ.
ದೂರ್ವ ಗಣಪತಿ ವ್ರತವನ್ನು ಮಾಡುವವರು ಸೂರ್ಯೋದಯಕ್ಕೂ ಮುನ್ನ ತಲೆ ಸ್ನಾನವನ್ನು ಮಾಡಬೇಕು. ಮನೆಯ ಈಶಾನ್ಯ ಭಾಗದಲ್ಲಿ ಮೊದಲಿಗೆ ಸ್ಥಳವನ್ನು ಸ್ವಚ್ಛ ಮಾಡಿಕೊಳ್ಳಬೇಕು. ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಬಿಡಿಸಿ ಅರಿಶಿಣ ಕುಂಕುಮದಿಂದ ಅಲಂಕಾರ ಮಾಡಬೇಕು. ನಂತರ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ನೀವು ಪೂರ್ವ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಳ್ಳಬೇಕು.
ಅರಿಶಿಣದಿಂದ ಗಣಪತಿಯನ್ನು ಮಾಡಿ ಇದನ್ನು ವೀಳ್ಯದೆಲೆಯ ಮೇಲೆ ಇರಿಸಬೇಕು. ಅರಿಶಿನದ ಗಣಪತಿಗೆ ಗಂಧ , ಅರಿಶಿನ ಕುಂಕುಮವನ್ನು ಹಚ್ಚಬೇಕು. ನಂತರ ಅಕ್ಷತೆ ಮತ್ತು ಹೂವನ್ನು ಸಮರ್ಪಿಸಬೇಕು. ದೀಪಗಳನ್ನು ನೈರುತ್ಯ ದಿಕ್ಕಿನ ಕಡೆ ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು.ನಂತರ ಮೂರು ದಳಗಳಿರುವ 21 ಗರಿಕೆಯನ್ನು ಗಣಪತಿಗೆ ಸಮರ್ಪಿಸುವಾಗ ಈ ಮಂತ್ರವನ್ನು ಹೇಳಬೇಕು.
ತ್ವಂ ದೂರ್ವೆ ಅಮೃತ ಜನ್ಮಾಸಿ ವಂದಿತಾಸಿ ಸುರೈರಪಿ l ಸೌಭಾಗ್ಯo ಸಂತಂತಿಂ ದೇಹಿ ಸರ್ವ ಕಾರ್ಯಕರೀ ಭವ ll