ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ದಾರಿದ್ರ್ಯ ಸುತ್ತಿಕೊಳ್ಳುತ್ತದೆಯಂತೆ
ಗುರುವಾರ, 27 ಜೂನ್ 2019 (08:41 IST)
ಬೆಂಗಳೂರು : ಪ್ರತಿದಿನ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಮಹಿಳೆಯರು ಮಾತ್ರ ಈ ದಿನಗಳಲ್ಲಿ ಸ್ನಾನ ಮಾಡಬಾರದಂತೆ. ಹೌದು. ಮಹಿಳೆಯರ ತಲೆಯ ಮಧ್ಯ ಭಾಗದ ಬೈತಲೆಯಲ್ಲಿ ಲಕ್ಷ್ಮೀ ದೇವಿಯ ಸಾನಿಧ್ಯವಿದೆಯಂತೆ. ಆದ್ದರಿಂದ ಮಹಿಳೆಯರು ಪ್ರತಿ ದಿನ ತಲೆ ಸ್ನಾನ ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಪುರಾಣಗಳ ಪ್ರಕಾರ ಮಹಿಳೆಯರು ಮಂಗಳವಾರ ತಲೆ ಸ್ನಾನ ಮಾಡಬಾರದು. ಒಂದುವೇಳೆ ಮಂಗಳವಾರದ ದಿನ ತಲೆಗೆ ಸ್ನಾನ ಮಾಡಿದರೆ ಮಂಗಳ ಗ್ರಹದ ಕೋಪಕ್ಕೆ ಗುರಿಯಾಗುತ್ತಾರೆ. ಹಾಗೆಯೇ ಬುಧವಾರದ ದಿನ ಒಬ್ಬನೇ ಒಬ್ಬ ಮಗ ಇರುವ ತಾಯಂದಿರು ತಲೆ ಸ್ನಾನ ಮಾಡಬಾರದಂತೆ. ಒಂದು ವೇಳೆ ಮಾಡಿದರೆ ಆ ಮಗನ ಆರೋಗ್ಯ ಕೆಡುತ್ತದೆಯಂತೆ. ಗುರುವಾರದ ದಿನ ತಲೆ ಸ್ನಾನ ಮಾಡಿದರೆ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳಂತೆ. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆಯಂತೆ. ಹಾಗೆ ಶನಿವಾರದ ದಿನ ತಲೆಗೆ ಸ್ನಾನ ಮಾಡಿದರೆ ಶನಿದೇವನು ಕೋಪಗೊಳ್ಳುತ್ತಾನಂತೆ.
ಆದ್ದರಿಂದ ಭಾನುವಾರ, ಸೋಮವಾರ ಹಾಗೂ ಶುಕ್ರವಾರದ ದಿನಗಳಲ್ಲಿ ಮಹಿಳೆಯರು ತಲೆಗೆ ಸ್ನಾನ ಮಾಡಿದರೆ ಯಾವ ಸಮಸ್ಯೆಯೂ ಇರುವುದಿಲ್ಲವಂತೆ .ಹಾಗೆಯೇ ಮುಟ್ಟಾದಾಗ ಹಾಗೂ ಸೂತಕದ ಸಂದರ್ಭದಲ್ಲಿ ಮಹಿಳೆಯರು ತಲೆಗೆ ಸ್ನಾನ ಮಾಡಿದರೆ ಯಾವ ದೋಷವೂ ಕೂಡ ಇರುವುದಿಲ್ಲ ಎಂದು ಪುರಾಣದಲ್ಲಿ ಹೇಳಲಾಗಿದೆ.